ರಾಜ್ಯದಲ್ಲಿ ಆಪರೇಷನ್ ಕಮಲ ಅನಿವಾರ್ಯ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: 'ರಾಜ್ಯದಲ್ಲಿ ಆಪರೇಷನ್ ಕಮಲ ಅನಿವಾರ್ಯ. ಆದರೆ, ನಾವು ಜನರ ಪರವಾಗಿ ಕೆಲಸ ಮಾಡುವುದನ್ನು ಎಲ್ಲಿಯೂ ನಿಲ್ಲಿಸಲಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರವಿವಾರ ಇಲ್ಲಿನ ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಲಾಯಿತು. ಆದರೆ, ನಾವು ಅಧಿಕಾರಕ್ಕೆ ಬಂದ ಬಳಿಕ ಏನು ಕೆಲಸ-ಕಾರ್ಯಗಳನ್ನು ಮಾಡದ್ದೀವಿ ಅನ್ನುವುದು ಮುಖ್ಯ. ಅಭಿವೃದ್ಧಿ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ತಿಳಿಸಿದರು.
ಅಧಿಕಾರವೇ ಗುರಿಯಾಗಿ ಕೆಲಸ ಮಾಡಬೇಡಿ. ಇದೊಂದು ಈಶ್ವರೀಯ ಕಾರ್ಯ. ಕಾಂಗ್ರೆಸ್‍ನಲ್ಲಿ ಒಂದು ಕುಟುಂಬದ ವ್ಯಕ್ತಿಗಳಿಗೆ ಜೈಕಾರ ಕೂಗಲಾಗುತ್ತದೆ. ಆದರೆ, ಕೌಟುಂಬಿಕವಾದ ಇಲ್ಲದ ಬಿಜೆಪಿ ಬೆಳೆಯುತ್ತಾ ಸಾಗಿದೆ. ಜಗತ್ತಿನ ಅತಿದೊಡ್ಡ ಪಕ್ಷವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮೋದಿ ಯುಗ ಪ್ರಾರಂಭವಾಗಿದೆ ಎಂದು ಹೇಳಿದರು.





