ಐಪಿಎಲ್-2022: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯಗಳಿಸಿದ ರಾಯಲ್ ಚಾಲೆಂಜರ್ಸ್

PHOTO:TWITTER/@IPL
ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ 54ನೇ ಪಂದ್ಯಾಟದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 67 ರನ್ ಗಳ ಜಯ ಸಾಧಿಸಿದೆ. 192 ರನ್ ಗಳಿಸಿ ಬೃಹತ್ ಮೊತ್ತದ ಗುರಿಯನ್ನು ಬೆನ್ನುಹತ್ತಿದ ಸನ್ ರೈಸರ್ಸ್ ತಂಡ ಕೇವಲ 125 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡದ ಪರ ಡು ಪ್ಲೆಸಿಸ್ 73 ರನ್, ರಜತ್ ಪಾಟೀದಾರ್ 48 ರನ್ ಹಾಗೂ ಕೊನೆಯ ಕ್ಷಣದಲ್ಲಿ ದಿನೇಶ್ ಕಾರ್ತಿಕ್ 8 ಎಸೆತಗಳಿಗೆ 30 ರನ್ ಗಳಿಸಿ ಗಮನಸೆಳೆದರು. ಒಟ್ಟು ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವಲ್ಲಿ ಆರ್ಸಿಬಿ ಶಕ್ತವಾಯಿತು.
ಈ ಗುರಿಯನ್ನು ಬೆನ್ನುಹತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡವು, ಕೇವಲ 125 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಆಲೌಟ್ ಆಯಿತು. ಹಸರಂಗ 5 ವಿಕೆಟ್ ಗಳಿಸಿ ಮಿಂಚಿದರು.
Next Story