ಬೆಂಗಳೂರು: ಭಾರೀ ಗಾಳಿ-ಮಳೆಗೆ ಹಲವೆಡೆ ಹಾನಿ, ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು: ಭಾರೀ ಗಾಳಿ-ಮಳೆಗೆ ಬೆಂಗಳೂರು ನಗರ ಸೇರಿದಂತೆ, ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ವಿದ್ಯುತ್ ತಂತಿಗಳ ಮೇಲೆ ಭಾರೀ ಗಾತ್ರದ ಮರ ಹಾಗು ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯ ಯ ಸಂಭವಿಸಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಳಿ ಮಳೆಗೆ ಒಟ್ಟು 375 ವಿದ್ಯುತ್ ಕಂಬಗಳು, 30 ಟಿಸಿ , ಅಲ್ಲದೆ 398 ಮರಗಳು ವಿದ್ಯುತ್ ತಂತಿಗಳ ಮೇಲೆರಗಿವೆ. ತುಮಕೂರು ವಿಭಾಗ ಒಂದರಲ್ಲಿ ಯೇ 85 ಕಂಬಗಳ ಮುರಿದಿವೆ.
ಎಚ್ಎಸ್ಆರ್ ಬಡಾವಣೆಯಲ್ಲಿ 35, ಹಿರಿಯೂರು 102, ನೆಲಮಂಗಲ 21, ಮಧುಗಿರಿ 25 ಕಂಬಗಳು ಬಿದ್ದ ವರದಿಯಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳೀಸಿದ್ದಾರೆ.
ಬೆಂಗಳೂರು ನಗರ ಪ್ರದೇಶದ ಕೆಂಗೇರಿ, ಬಂಡೇಮಠ , ಎಚ್ ಎಸ್ ಆರ್ ಬಡಾವಣೆ ಮೊದಲಾದೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
Next Story





