Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ9 May 2022 12:05 AM IST
share
ಓ ಮೆಣಸೇ...

ಟಿಕೆಟ್‌ಗಾಗಿ ಸೆರಗು, ಪಂಚೆ ಹಿಡಿದುಕೊಂಡು ಬರಬೇಡಿ - ಬಿ.ಎಲ್.ಸಂತೋಷ್, ಬಿಜೆಪಿ ಪ್ರ.ಕಾರ್ಯದರ್ಶಿ
ಕ್ಯಾಶ್ ತನ್ನಿ, ಉಡುಗೊರೆಯಾಗಿ ನೀಡುವ ಪ್ರಾಪರ್ಟಿಗಳ ವಿವರ ತನ್ನಿ, ನಾವು ನೀಡಿದ ಬ್ಯಾಂಕ್ ಖಾತೆಗಳಿಗೆ ಜಮೆಮಾಡಿದ ಮೊತ್ತಗಳ ರಶೀದಿ ತನ್ನಿ.

ನನ್ನ ಸಾಮರ್ಥ್ಯವನ್ನು ಮಾತಿನಿಂದ ಅಲ್ಲ, ಕೆಲಸದಿಂದ ಅಳೆಯಿರಿ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕೆಲಸ ಕಂಡು ನಿರಾಶರಾಗಿದ್ದವರು ಮಾತನ್ನು ನಂಬಿಕೊಂಡಿದ್ದರು. ಅದನ್ನೂ ಕಿತ್ತು ಕೊಳ್ಳುವಿರಾ?

ನಮ್ಮ ಪಕ್ಷ ನಿಂತ ನೀರಲ್ಲ, ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ  -ಸಿ.ಟಿ.ರವಿ, ಶಾಸಕ
ಒಂದು ಕಾಲದಲ್ಲಿ ನಿಂತ ನೀರಾಗಿದ್ದ ನಿಮ್ಮ ಪಕ್ಷ ಇಂದು ಕೊಳೆತ ಕೆಸರಾಗಿರುವುದನ್ನು ಎಲ್ಲರೂ ಕಾಣುತ್ತಿದ್ದಾರೆ, ಅನುಭವಿಸುತ್ತಿದ್ದಾರೆ.

ಹಳೇ ಮೈಸೂರು ಭಾಗದ ಜನರು ಬಹಳ ಬುದ್ಧಿವಂತರು, ಆ ಭಾಗಕ್ಕೆ ಬಿಜೆಪಿ ಕೈ ಹಾಕುವುದು ಅಷ್ಟು ಸುಲಭವಲ್ಲ  - ದೇವೇಗೌಡ, ಮಾಜಿ ಪ್ರಧಾನಿ
ಹಾಗಂತ ನೀವೀಗ ಬುದ್ಧಿವಂತರು ಕೈಹಾಕದ ಜಾಗಗಳ ಪಟ್ಟಿ ತಯಾರಿಸಲು ಹೊರಟಿರುವುದೇಕೆ?

ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಏಡ್ಸ್ ರೋಗದಂತೆ ಹಬ್ಬಿದೆ  -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಕೋವಿಡ್‌ನಂತೆ ಇದ್ದಿದ್ದರೆ ಅದರಿಂದ ಲಾಭಗಳಿಸಬಹುದಿತ್ತು ಅಂತೀರಾ?

ಭಾರತದ ಒಂದಿಂಚು ಭೂಮಿಯನ್ನೂ ಚೀನಾಕ್ಕೆ ಬಿಟ್ಟುಕೊಡುವುದಿಲ್ಲ  -ಜ.ಮನೋಜ್ ಪಾಂಡೆ, ನೂತನ ಭೂಸೇನಾ ಮುಖ್ಯಸ್ಥ
ಇದೆಲ್ಲಾ ಅರ್ಜಿ ಸಲ್ಲಿಸಿದವರಿಗೆ ನೀಡಬೇಕಾದ ಉತ್ತರ.

ಹಿಂದೂಗಳನ್ನು ರಕ್ಷಿಸಲು ಮತ್ತು ಹಿಂದೂಗಳಿಗೆ ಹಿಂದೂ ರಾಷ್ಟ್ರ ನೀಡಲು ಹೆರುವ ಸಾಮರ್ಥ್ಯವುಳ್ಳ ಹಿಂದೂ ಮಹಿಳೆಯರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರಬೇಕು-ಸಾಧ್ವಿ ಅನ್ನಪೂರ್ಣ ಭಾರತಿ, ಹಿಂದೂ ಮಹಾಸಭಾ ಕಾರ್ಯದರ್ಶಿ
ಹೆರುವ ಸಾಮರ್ಥ್ಯವಿಲ್ಲ ಎಂದು ಸನ್ಯಾಸಿಯಾದವರ ಉಪದೇಶವಿದು.

ನಾನು ನನ್ನ ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು ಎಂದರೆ ಅದು ಪಕ್ಷಾಂತರ ಮಾಡಿದ್ದು - ಎಂಟಿಬಿ ನಾಗರಾಜ್, ಸಚಿವ
ನಿಮ್ಮನ್ನು ಪಕ್ಷಾಂತರ ಮಾಡಿಸಿದ್ದಕ್ಕಾಗಿ ಬಿಜೆಪಿ ಕೂಡ ಪ್ರಾಯಶ್ಚಿತ್ತ ಪಡುತ್ತಿದೆ.

ಬಸವಣ್ಣನ ವಚನಗಳನ್ನು ಎಲ್ಲರೂ ಓದಬೇಕು - ಅಮಿತ್ ಶಾ, ಕೇಂದ್ರ ಸಚಿವ
ಹಾಗಾದರೆ ಪಠ್ಯಪುಸ್ತಕಗಳಲ್ಲಿ ಅದನ್ನೇ ಸೇರಿಸಬಹುದಲ್ಲಾ!

ಎಲ್ಲದರಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ - ಡಾ.ಸುಧಾಕರ್, ಸಚಿವ
ನೀವು ಮಾತ್ರ ಎಲ್ಲದರಲ್ಲೂ ರಾಜಕೀಯ ನಷ್ಟ ಅನುಭವಿಸುತ್ತಿದ್ದೀರಾ?

ಬಿಜೆಪಿಯವರು ಭರವಸೆ ಕೊಡುವುದರಲ್ಲಿ ನಿಸ್ಸೀಮರು. ನಾವು ಹಾಗಲ್ಲ, ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ - ಸಿದ್ದರಾಮಯ್ಯ, ಮಾಜಿ ಸಿಎಂ
ನೀವು ಜನರಿಗೆ ಬೇಕಾದ ಮಾತುಕೊಟ್ಟರೆ ತಾನೇ ತಪ್ಪಿ ನಡೆಯುವ ಪ್ರಶ್ನೆ?

ಉಪ್ಪು ತಿಂದವರು ಯಾರೇ ಆಗಿರಲಿ ಅವರು ನೀರು ಕುಡಿಯಲೇಬೇಕು - ಡಾ.ಅಶ್ವತ್ಥನಾರಾಯಣ, ಸಚಿವ
ಅಷ್ಟೇ ತಾನೇ? ತಿನ್ನುತ್ತಾ ಕುಡಿಯುತ್ತಾ ಇರಿ. ಜನ ನೋಡುತ್ತಾ ಇರುತ್ತಾರೆ.

ಭ್ರಷ್ಟಾಚಾರಿಗಳು ಎಲ್ಲ ಪಕ್ಷದಲ್ಲೂ ಇದ್ದಾರೆ  -ಆರ್.ಅಶೋಕ್, ಸಚಿವ
ಆದ್ದರಿಂದ ಭ್ರಷ್ಟಾಚಾರಿಗಳು ಮಾತ್ರ ಇರುವ ಒಂದು ಅಸಾಮಾನ್ಯ ಪಕ್ಷವನ್ನು ಕಟ್ಟಿಕೊಂಡಿದ್ದೀರಾ?

ಮಾತೃ ಭಾಷೆ ಬಳಕೆ ಮಾಡುವುದು ನಮ್ಮ ಹಕ್ಕು, ಅದನ್ನು ನಾವು ಮಾಡಿಯೇ ಮಾಡುತ್ತೇವೆ - ಸುನೀಲ್ ಕುಮಾರ್, ಸಚಿವ
ಸಂಸ್ಕೃತವೇ ಎಲ್ಲ ಭಾಷೆಗಳ ಮಾತೃಭಾಷೆ ಎಂಬ ನಿಮ್ಮ ನಂಬಿಕೆಯನ್ನು ಯಾವಾಗ ಬಹಿರಂಗಪಡಿಸುತ್ತೀರಿ?

ನಾವು ಆಂಜನೇಯನ ವಂಶದವರು. ಮಹಾರಾಷ್ಟ್ರದ ಪುಂಡರು ನಮ್ಮ ತಂಟೆಗೆ ಬಂದರೆ ಹುಷಾರ್ - ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಕನ್ನಡಿ ನೋಡಿ ಸ್ಫೂರ್ತಿ ಪಡೆದಂತಿದೆಯಲ್ಲಾ!

ನನ್ನ ವಿರುದ್ಧ ಯಾವುದೇ ಆರೋಪ ದೃಢಪಟ್ಟಲ್ಲಿ ನೇಣಿಗೇರಲೂ ಸಿದ್ಧ  -ಎಂ.ಪಿ.ರೇಣುಕಾಚಾರ್ಯ, ಶಾಸಕ
ಸರಿ. ಒಂದು ಆರೋಪಕ್ಕೆ ಪರಿಹಾರವಾಯಿತು. ಉಳಿದ ಆರೋಪಗಳ ಗತಿ ಏನು?

ಬಿಟ್ ಕಾಯಿನ್ ಪ್ರಕರಣದ ತನಿಖೆಯಾದರೆ ರಾಜ್ಯಕ್ಕೆ ಈ ಅವಧಿಯಲ್ಲಿ ಬಿಜೆಪಿಯಿಂದ ಮೂರನೇ ಸಿಎಂ ಸಿಗಲಿದ್ದಾರೆ - ಪ್ರಿಯಾಂಕ್ ಖರ್ಗೆ, ಶಾಸಕ
ಏನೇ ಆಗಲಿ, ಆ ಪಕ್ಷದಿಂದಾಗಿ ರಾಜ್ಯಕ್ಕೆ ಹೊಸ ಮುಖಗಳು ಕಾಣಲು ಸಿಗುತ್ತಿವೆಯಲ್ಲಾ!

ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕೆಂದು ಪ್ರಧಾನಿ ಮೋದಿ ಹೇಳಿದ್ದು, ಅದು ಕಾರ್ಯರೂಪಕ್ಕೆ ಬರಬೇಕಿದೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಉಳಿದವರೂ ಪತ್ನಿಪರಿತ್ಯಾಗ ಮಾಡಲಿದ್ದಾರೆಯೇ?

40 ಪರ್ಸೆಂಟ್ ಕಮಿಶನ್ ವಿರುದ್ಧ ನಮ್ಮ ಹೋರಾಟ ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ನಡೆಯಲಿದೆ - ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಹಠಾತ್ತಾಗಿ 50 ಪರ್ಸೆಂಟ್ ಭಡ್ತಿಗೆ ಜನ ಒಪ್ಪುತ್ತಾರೆಯೇ?

ಪಿಎಸ್ಸೈ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳಲಿವೆ - ನಳಿನ್ ಕುಮಾರ್ ಕಟೀಲು, ಸಂಸದ
ಅಂದರೆ ತನಿಖೆಯನ್ನೂ ಪಕ್ಷಹಿತದಿಂದಲೇ ಮಾಡುವಿರಾ?

ರಶ್ಯ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ-  ನರೇಂದ್ರ ಮೋದಿ, ಪ್ರಧಾನಿ
ಆದರೆ ಏರುತ್ತಿರುವ ಬೆಲೆ ನೋಡಿದರೆ ಭಾರತೀಯರಿಗೆ ಸೋಲು ಕಟ್ಟಿಟ್ಟ ಬುತ್ತಿ.

ರಾಜ್ಯದ ಜನರು ಸಿಎಂ ಬೊಮ್ಮಾಯಿ ಅವರ ಮುಂದಾಳತ್ವ ಬಯಸುತ್ತಿದ್ದಾರೆ - ಅರುಣ್ ಸಿಂಗ್, ಬಿಜೆಪಿ ಉಸ್ತುವಾರಿ
ಅಷ್ಟು ಬೇಗ ಎರಡೂವರೆ ಸಾವಿರ ಕೋಟಿಯ ಬಂದೋಬಸ್ತು ಆಗಿಯೂ ಬಿಟ್ಟಿತೇ?

ದೇಶ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲ ರಾಹುಲ್ ಗಾಂಧಿ ವಿದೇಶಕ್ಕೆ ತೆರುಳುತ್ತಾರೆ - ಶಹಝಾದ್ ಪೂನಾವಾಲ, ಬಿಜೆಪಿ ವಕ್ತಾರ
ಅವರು ಇಲ್ಲೇ ಉಳಿದರೆ, ಬಿಕ್ಕಟ್ಟಿಗೆ ಅವರೇ ಕಾರಣ ಎಂದು ದೂಷಿಸುವುದಕ್ಕೆ ನಿಮಗೊಬ್ಬ ಬಲಿಯಾಡು ಸಿಗುತ್ತಿದ್ದರು, ಅಲ್ಲವೇ?

ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ನಾವು ರಾಜಕೀಯ ಚರ್ಚೆ ಮಾಡಲು ಹೋಗುವುದಿಲ್ಲ - ಎಂ.ಬಿ.ಪಾಟೀಲ್, ಶಾಸಕ
ಆಧ್ಯಾತ್ಮಿಕ ಚರ್ಚೆಗೆ ಬೇಕಾದ ಸಾಮರ್ಥ್ಯವಾದರೂ ನಿಮ್ಮಲ್ಲುಂಟೇ?

ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ - ಯು.ಟಿ.ಖಾದರ್, ಮಾಜಿ ಸಚಿವ
 ಮರಳು ಮಾಫಿಯಾದಲ್ಲಿ ಪಾಲುದಾರಿಕೆ ಕುರಿತು ಮಾತನಾಡುತ್ತಿದ್ದೀರಾ?

ಬದಲಾದ ವ್ಯವಸ್ಥೆಯಲ್ಲಿ ಮತದಾರರ ಅಭಿಪ್ರಾಯದಂತೆ ನಾನು ಬಿಜೆಪಿ ಸೇರುತ್ತಿದ್ದೇನೆ - ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ
ಪರಿಸ್ಥಿತಿ ಮತ್ತೆ ಬದಲಾದರೆ, ಮತ್ತೆ ಪಕ್ಷ ಬದಲಾಯಿಸಿದರಾಯಿತು.

ಬಿತ್ತನೆ ಬೀಜ-ರಸ ಗೊಬ್ಬರ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಿದರೆ ಅಂಗಡಿದಾರರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು  -ಬಿ.ಸಿ.ಪಾಟೀಲ್, ಸಚಿವ
ಅಂಗಡಿದಾರರಿಗೆ ನಿಗದಿತ ಬೆಲೆಗೆ ಮಾರಲು ಅಡ್ಡಿಯಾಗುವ ಮಧ್ಯವರ್ತಿಗಳ ಮೇಲೆ ಕ್ರಮ ಇಲ್ಲವೇ ?

ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದ್ದೇ ರೆಡ್ಡಿಗಳಿಂದ  ಜನಾರ್ದನ ರೆಡ್ಡಿ, ಮಾಜಿ ಸಚಿವ
ರೆಡ್ಡಿ, ಬಡ್ಡಿ ಇತ್ಯಾದಿ ಎಲ್ಲಕ್ಕಿಂತ ದುಡ್ಡಿನ ಪಾತ್ರ ಮುಖ್ಯವಾಗಿತ್ತು ಅಂತಾರೆ ಪಕ್ಷದವರು.

ಅಧಿಕಾರ ಇರುವಾಗ ಭ್ರಷ್ಟರನ್ನು ಪೋಷಿಸುತ್ತಾ ಬಂದಿದ್ದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ  -ಎಸ್.ಅಂಗಾರ, ಸಚಿವ
ಈಗಲಾದರೂ ಅವರು ಭ್ರಷ್ಟರನ್ನು ಪೋಷಿಸುವ ಕೆಲಸವನ್ನು ಈಗ ಅಧಿಕಾರದಲ್ಲಿರುವವರಿಗೆ ಬಿಟ್ಟುಕೊಡಬೇಕಲ್ಲವೇ ?

share
ಪಿ.ಎ.ರೈ
ಪಿ.ಎ.ರೈ
Next Story
X