ಹಾಂಕಾಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜಾನ್ ಲೀ ಆಯ್ಕೆ

PHOTO:REUTERS
ಹಾಂಕ್ಕಾಂಗ್ ಸಿಟಿ, ಮೇ 8: ಚೀನಾ ಪರ ನಿಲುವು ಹೊಂದಿರುವ ಜಾನ್ ಲೀ ಅವರನ್ನು ಹಾಂಕಾಂಗ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.ರವಿವಾರ ನಡೆದ 1,500 ಸದಸ್ಯರ ಚುನಾವಣಾ ಸಮಿತಿಯಲ್ಲಿ ಲೀ ಪರ 1,416 ಮತ ಚಲಾವಣೆಯಾದರೆ ವಿರುದ್ಧ 8 ಮತ ಚಲಾವಣೆಯಾಗಿದೆ. ಜತೆಗೂಡಿ ಹಾಂಕಾಂಗ್ನಲ್ಲಿ ಹೊಸ ಅಧ್ಯಾಯ ಆರಂಭಿಸುವಾ’ ಎಂಬ ಘೋಷಣೆಯೊಂದಿಗೆ ಲೀ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಅವರು ಏಕೈಕ ಅಭ್ಯರ್ಥಿಯಾಗಿದ್ದರು.ಹಾಂಕಾಂಗ್ನಲ್ಲಿ ನಡೆದಿದ್ದ ಪ್ರಜಾಪ್ರಭುತ್ವ ಪರ ಅಭಿಯಾನವನ್ನು ನಿರ್ದಯವಾಗಿ ಹತ್ತಿಕ್ಕಿದ್ದ ಲೀ, ಚೀನಾದ ಪ್ರಬಲ ಬೆಂಬಲಿಗರಾಗಿದ್ದಾರೆ. 2020ರಲ್ಲಿ ಚೀನಾ ಸೂಚಿಸಿದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹಾಂಕಾಂಗ್ನಲ್ಲಿ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಲೀ ಅವರನ್ನು ಅಮೆರಿಕ ನಿರ್ಬಂಧ ಪಟ್ಟಿಯಲ್ಲಿ ಸೇರಿಸಿದೆ.
Next Story





