ರಾಜಸ್ಥಾನ ಸಚಿವ ಮಹೇಶ್ ಜೋಷಿ ಪುತ್ರನಿಂದ ಅತ್ಯಾಚಾರ: ಯುವತಿ ಆರೋಪ

ಜೈಪುರ, ಮೇ 8: ರಾಜಸ್ಥಾನದ ಸಚಿವ ಮಹೇಶ್ ಜೋಷಿ ಅವರ ಪುತ್ರ ರೋಹಿತ್ ಜೋಷಿ ಒಂದು ವರ್ಷಕ್ಕೂ ಅಧಿಕ ಅವಧಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಜೈಪುರದ 23ರ ಹರೆಯದ ಯುವತಿಯೋರ್ವಳು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಝೀರೋ ಎಫ್ಐಆರ್ (ಘಟನೆ ಎಲ್ಲಿ ಸಂಭವಿಸಿದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದು ಝೀರೋ ಎಫ್ಐಆರ್) ದಾಖಲಿಸಿದ್ದಾರೆ. ‘‘ರಾಜಸ್ಥಾನ ಪೊಲೀಸರು ಎಫ್ಐಆರ್ ಬಗ್ಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು’’ ಎಂದು ದಿಲ್ಲಿ ಪೊಲೀಸ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಸಚಿವ ಮಹೇಶ್ ಜೋಷಿ ಅವರಿಂದ ಇದುವರೆಗೆ ಪ್ರತಿಕ್ರಿಯೆ ದೊರಕಿಲ್ಲ.
ದೂರಿನಲ್ಲಿ ಯುವತಿ, ‘‘ಕಳೆದ ವರ್ಷ ಜನವರಿ 8ರಿಂದ ಈ ವರ್ಷ ಎಪ್ರಿಲ್ 17ರ ನಡುವೆ ಸಚಿವರ ಪುತ್ರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ’’ ಎಂದು ಆರೋಪಿಸಿದ್ದಾರೆ.
Next Story





