ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ: ದಿನೇಶ್ ಗುಂಡೂರಾವ್

ಬೆಂಗಳೂರು: 'ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ. ಬಡವರ ಪಾಲಿಗೆ ಮೋದಿ ಸರ್ಕಾರ ಶಾಪಗ್ರಸ್ತ ಸರ್ಕಾರವಾಗಿದೆ' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಮೋದಿಯವರ ಅಚ್ಚೇದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವ ಗ್ಯಾಸ್ ಬೆಲೆಯೇರಿಕೆಯ ಶಾಕ್‌ಗೆ ತತ್ತರಿಸಿ ಹೋಗಿದ್ದಾನೆ. ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ಬಡವನಿಗೆ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೆ ಆಸರೆ' ಎಂದು ಹೇಳಿದ್ದಾರೆ.
'ಹೊಗೆ ರಹಿತ ಅಡುಗೆ ಮನೆ ಉಜ್ವಲಾ ಯೋಜನೆಯ ಮೂಲ ಉದ್ದೇಶ. ಆದರೆ ಕೇಂದ್ರ ಸಿಲಿಂಡರ್ ಬೆಲೆಯನ್ನು ಯದ್ವಾತದ್ವಾ ಏರಿಸಿದರೆ ಬಡವನಿಗೆ ಕೊಳ್ಳುವ ಶಕ್ತಿಯೆಲ್ಲಿದೆ? ಬಡವರು ಈ ದರದಲ್ಲಿ ಸಿಲಿಂಡರ್ ಖರೀದಿಸಿ ಅನ್ನ ಬೇಯಿಸಲು ಸಾಧ್ಯವೆ? ಬಡವರು ಅನ್ಯಮಾರ್ಗವಿಲ್ಲದೆ ಅಡುಗೆಗೆ ಸೌದೆಯನ್ನೇ ಬಳಸಬೇಕು. ಹಾಗಾದರೆ ಉಜ್ವಲಾ ಯೋಜನೆಯ ಸಾರ್ಥಕತೆಯೇನು.?' ಎಂದು ಪ್ರಶ್ನಿಸಿದ್ದಾರೆ.
'UPA ಸರ್ಕಾರವಿದ್ದಾಗ ಗ್ಯಾಸ್‌ಗೆ ಸಬ್ಸಿಡಿ ದೊರೆಯುತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ UPA ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಎನ್ನುವುದು ಮೋದಿ ಸರ್ಕಾರದ ಉದ್ದೇಶವೇ?' ಎಂದು ಪ್ರಶ್ನಿಸಿದ್ದಾರೆ
'ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ. ಬಡವರ ಪಾಲಿಗೆ ಮೋದಿ ಸರ್ಕಾರ ಶಾಪಗ್ರಸ್ತ ಸರ್ಕಾರವಾಗಿದೆ. ಬೆಲೆಯೇರಿಕೆ ಕೇವಲ ಗ್ಯಾಸ್‌ಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ವಸ್ತುವಿನ ಬೆಲೆಯೂ ಕೈಗೆಟುಕದಂತಾಗಿದೆ. ಬೆಲೆಯೇರಿಕೆಯಿಂದ ಆಮ್ ಆದ್ಮಿಯ ಪಾಡು ಅವನಿಗಷ್ಟೇ ಗೊತ್ತು' ಎಂದು ಕೇಂದ್ರ ಸರಕಾರದ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
4
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 9, 2022
ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ. ಬಡವರ ಪಾಲಿಗೆ ಮೋದಿ ಸರ್ಕಾರ ಶಾಪಗ್ರಸ್ತ ಸರ್ಕಾರವಾಗಿದೆ.
ಬೆಲೆಯೇರಿಕೆ ಕೇವಲ ಗ್ಯಾಸ್‌ಗೆ ಮಾತ್ರ ಸೀಮಿತವಾಗಿಲ್ಲ.
ಪ್ರತಿಯೊಂದು ವಸ್ತುವಿನ ಬೆಲೆಯೂ ಕೈಗೆಟುಕದಂತಾಗಿದೆ.
ಬೆಲೆಯೇರಿಕೆಯಿಂದ ಆಮ್ ಆದ್ಮಿಯ ಪಾಡು ಅವನಿಗಷ್ಟೇ ಗೊತ್ತು.







