ಇಂದಿನಿಂದ ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ
ಉಳ್ಳಾಲ, ಮೇ 9: ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ವಲಿಯುಲ್ಲಾಹಿ ಹಝ್ರತ್ ಹುಸೈನ್ ಮುಸ್ಲಿಯಾರ್ (ಖ.ಸಿ.) ಹೆಸರಿನಲ್ಲಿ ವರ್ಷ ಪ್ರತೀ ನಡೆಯುವ ಕೂಟು ಝಿಯಾರತ್ ಕಾರ್ಯಕ್ರಮವು ಮೇ 9ರಿಂದ ಮೇ 19ರವರೆಗೆ ಜರುಗಲಿದೆ.
ಈ ಪ್ರಯುಕ್ತ ಮೇ 9ರಿಂದ ಮೇ 18ರವರೆಗೆ ಜಮಾಅತ್ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಕಿನ್ಯ ಅಧ್ಯಕ್ಷತೆಯಲ್ಲಿ
ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ರಾಫಿ ಅಹ್ಸನಿ ಕಾಂತಪುರಂ, ರಫೀಕ್ ಸಅದಿ ದೇಲಂಪಾಡಿ, ಶಮೀರ್ ದಾರಿಮಿ ಕೊಲ್ಲಂ ಮೊದಲಾದ ಹಲವು ಉಲಮಾ ನಾಯಕರು ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮೇ 19ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಿನ್ಯ ಕೇಂದ್ರ ಜುಮಾ ಮಸೀದಿಯ ಜಮಾಅತ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
Next Story





