ಸಿಎಂ ಉದ್ಘಾಟಿಸಿದ್ದ ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿತ: 40% ಕಮಿಷನ್ ಕಳಪೆ ಕಾಮಗಾರಿಗೆ ಇದು ಸಾಕ್ಷಿ ಎಂದ ಕಾಂಗ್ರೆಸ್

ಬೆಂಗಳೂರು: ನಗರದಲ್ಲಿ ರವಿವಾರ ಸುರಿದ ಭಾರೀ ಗಾಳಿ -ಮಳೆಗೆ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಒಂದು ಭಾಗ ಕುಸಿದು ಬಿದ್ದಿದ್ದು, 'ಇದು 40% ಕಮಿಷನ್ ಪಡೆದು ಮಾಡಿದ ಕಳಪೆ ಕಾಮಗಾರಿಗೆ ಸಾಕ್ಷಿ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕಳೆದ 2 ತಿಂಗಳ ಹಿಂದೆ HSR ಲೇಔಟ್ ನಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ದ ವಾಜಪೇಯಿ ಕ್ರೀಡಾಂಗಣದ ಛಾವಣಿ ಒಂದೆರಡು ಮಳೆಗೆ ಕುಸಿದು ಬಿದ್ದಿದೆ, 40% ಕಮಿಷನ್ ತೆಗೆದುಕೊಂಡು 2 ತಿಂಗಳಿಗೆ 4 ಕೋಟಿ ವ್ಯಯಿಸಿ ಮಾಡಿದ ಕಳಪೆ ಕಾಮಗಾರಿಗೆ ಇದು ಸಾಕ್ಷಿ' ಎಂದು ಟೀಕಿಸಿದೆ.
'ಬಿಜೆಪಿ 40% ಕಮಿಷನ್ ಸರ್ಕಾರ ಎಂದು ಅವರ ಕಳಪೆ ಕೆಲಸಗಳೇ ಹೇಳುತ್ತಿವೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್ಎಸ್ ಆರ್ ಬಡಾವಣೆಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 3.5 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು.
ಕಳೆದ 2 ತಿಂಗಳ ಹಿಂದೆ HSR ಲೇಔಟ್ ನಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ದ
— Karnataka Congress (@INCKarnataka) May 9, 2022
ವಾಜಪೇಯಿ ಕ್ರೀಡಾಂಗಣದ ಛಾವಣಿ ಒಂದೆರಡು ಮಳೆಗೆ ಕುಸಿದು ಬಿದ್ದಿದೆ,
40% ಕಮಿಷನ್ ತೆಗೆದುಕೊಂಡು 2 ತಿಂಗಳಿಗೆ 4 ಕೋಟಿ
ವ್ಯಯಿಸಿ ಮಾಡಿದ ಕಳಪೆ ಕಾಮಗಾರಿಗೆ ಇದು ಸಾಕ್ಷಿ !!@BJP4Karnataka 40% ಕಮಿಷನ್ ಸರ್ಕಾರ
ಎಂದು ಅವರ ಕಳಪೆ ಕೆಲಸಗಳೇ ಹೇಳುತ್ತಿವೆ. pic.twitter.com/JTJoEFpmhg







