ಶನಿವಾರಸಂತೆ: ಹೊಳೆಗೆ ಈಜಲು ಹೋದ ಬಾಲಕ ನೀರುಪಾಲು

ಸಾಂದರ್ಭಿಕ ಚಿತ್ರ
ಮಡಿಕೇರಿ ಮೇ 9 : ಹೊಳೆಯಲ್ಲಿ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಸಮೀಪದ ಹೆಮ್ಮನೆ ಗ್ರಾಮದಲ್ಲಿ ನಡೆದಿದೆ.
ಬೈಲುಕೊಪ್ಪದ ನಾಸೀರ್ ಪಾಷ, ಫಸಿಯಾ ಬಾನು ದಂಪತಿಯ ಪುತ್ರ ಫರ್ಹಾನ್ (12) ಸಾವನ್ನಪ್ಪಿದ ಬಾಲಕ ಎಂದು ತಿಳಿದು ಬಂದಿದೆ.
ರಂಜಾನ್ ಹಬ್ಬಕ್ಕೆಂದು ಶನಿವಾರಸಂತೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದ ಫರ್ಹಾನ್ ಮಾವನ ಮಗ ಸಮೀರ್ ಜೊತೆ ಹೊಳೆಗೆ ಆಟವಾಡಲೆಂದು ತೆರಳಿದ್ದು, ಈ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸಮೀರ್ ಪೋಷಕರಿಗೆ ತಿಳಿಸಿದ್ದಾನೆ.
ಹೊಳೆಯಲ್ಲಿ ಈಜಾಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮಗ ಮೃತಪಟ್ಟಿರುವುದಾಗಿ ತಂದೆ ನಾಸೀರ್ ಪಾಷ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





