ಮಂಗಳೂರು : ಬಿಎಂಡಬ್ಲ್ಯು ಕಾರು ಚಾಲಕನ ಮದ್ಯ ಸೇವನೆ ವರದಿ ನೆಗೆಟಿವ್
ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ
ಮಂಗಳೂರು : ನಗರದ ಬಲ್ಲಾಳ್ ಭಾಗ್‌ನಲ್ಲಿ ಕಳೆದ ತಿಂಗಳು ನಡೆದ ಸರಣಿ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಬಿಎಂಡಬ್ಲ್ಯು ಕಾರು ಚಾಲಕನ ಡ್ರಗ್ಸ್, ಮದ್ಯ ಸೇವನೆಯ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡು ಎರಡು ವಾರದ ಬಳಿಕ ಮೃತಪಟ್ಟಿದ್ದರು. ಹಾಗಾಗಿ ಚಾಲಕನ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.
ಆರೋಪಿ ಕಾರು ಚಾಲಕ ಡ್ರಗ್ಸ್ ಅಥವಾ ಮದ್ಯ ಸೇವಿಸಿದ ಬಗ್ಗೆ ಸಂದೇಹ ಉಂಟಾಗಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Next Story





