ಮೇ 10: ‘ವಿಮೆನ್ಸ್ ಎಜುಕೇಶನ್ ಕೌನ್ಸಿಲ್’ನ ಕಿತಾಬ್ ಬಿಡುಗಡೆ
ಮಂಗಳೂರು : ಮಹಿಳಾ ಶರೀಅತ್ ಕಾಲೇಜುಗಳ ಪಠ್ಯ ಪುಸ್ತಕಗಳಾಗಿ ಹೊರತಂದಿರುವ ನಾಲ್ಕು ಕಿತಾಬ್‌ಗಳ ಬಿಡುಗಡೆ ಕಾರ್ಯಕ್ರಮ ಹಾಗೂ ಮಹಿಳಾ ಕಾಲೇಜು ಪ್ರತಿನಿಧಿಗಳ ಸಮಾವೇಶವು ಮೇ 10ರಂದು ಬಿ.ಸಿ. ರೋಡ್ ಸಮೀಪದ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ನಡೆಯುವ ಸಮಾವೇಶದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಝೈನುಲ್ ಉಲಮಾ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಕಿತಾಬ್‌ಗಳ ಪ್ರಕಾಶನ ನಿರ್ವಹಿಸಲಿದ್ದಾರೆ. ಸೈಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಹಾದಿ ತಂಳ್ ಉಜಿರೆ ಸಮಾವೇಶ ಉದ್ಘಾಟಿಸಲಿದ್ದಾರೆ. ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನಿ ಕಾಮಿಲ್ ಅಧ್ಯಕ್ಷತೆ ವಹಿಸುವರು.
ಮಹಿಳಾ ಶರೀಅತ್ ಕಾಲೇಜುಗಳ ಪಠ್ಯಕ್ರಮ, ಪಠ್ಯ ಪುಸ್ತಕ ಮತ್ತು ಅನುಬಂಧ ಕಾರ್ಯಗಳ ನಿರ್ವಣೆಗಾಗಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮಾರ್ಗದರ್ಶನದಲ್ಲಿ ೨೦೧೮ರಲ್ಲಿ ಆರಂಭಿಸಿದ ‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್’ ಈಗಾಗಲೇ ಹಲವು ಮಹಿಳಾ ಕಾಲೇಜುಗಳಿಗೆ ಸಿಲೆಬಸ್ ಮತ್ತು ಕಿತಾಬ್‌ಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಮೊದಲ ಹಂತವಾಗಿ ಹದೀಸ್ ಕಲಿಕೆಗೆ ಸಾವಿರ ಹದೀಸ್‌ಗಳ ಸಂಗ್ರಹ ’ರೌಳು ಸ್ವಾಲಿಹಾತ್, ತಸವ್ವಫ್‌ಗೆ ಇಹ್ಯಾ ಉಲೂಮಿದ್ದೀನ್‌ನ ಸಂಗ್ರಹ, ತಹ್‌ದೀಬುಲ್ ಅಖ್‌ಲಾಖ್’ ಚರಿತ್ರೆಗೆ ’ಮಕಾನತುಲ್ ಮರ್‌ಅತಿ ಫಿಲ್ ಇಸ್ಲಾಂ, ಹಾಗೂ ವಿವಿಧ ಎಂಟು ಪುಟ್ಟ ಕಿತಾಬ್‌ಗಳನ್ನು ಸೇರಿಸಿ ’ಸಮಾನಿಯತ್ ಕುತುಬ್’ ಎಂಬ ಗ್ರಂಥಗಳನ್ನು ಹೊರತರಲಾಗಿದೆ. ದಕ್ಷಿಣ ಕರ್ನಾಟಕದ ವಿವಿಧ ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ನಲವತ್ತಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವರು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಸಖಾಫಿ ಎಂ.ಇ. ತಿಳಿಸಿದ್ದಾರೆ.