ಕುಂಟಿಕಾನ: ಸ್ಕೂಟರ್ ಸವಾರ ಮೃತ್ಯು
ಮಂಗಳೂರು : ಬಸ್‌ಗೆ ಹಿಂದಿನಿಂದ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನದಲ್ಲಿ ರವಿವಾರ ನಡೆದಿದೆ.
ಮಂಜನಾಡಿ ಸಮೀಪದ ತೌಡುಗೋಳಿ ನಿವಾಸಿ ಇರ್ಫಾನ್ (28) ಮೃತಪಟ್ಟವರು. ಇವರು ಕೊಟ್ಟಾರಚೌಕಿ ಕಡೆಯಿಂದ ಕೆಪಿಟಿ ಕಡೆಗೆ ತೆರಳುತ್ತಿದ್ದಾಗ ಎದುರಿನಲ್ಲಿ ಹೋಗುತ್ತಿದ್ದ ಖಾಸಗಿ ಬಸ್ ಚಾಲಕ ಬಸ್‌ನ್ನು ಎ.ಜೆ ಆಸ್ಪತ್ರೆ ಬಳಿ ಏಕಾಏಕಿ ನಿಲ್ಲಿಸಿದ. ಪರಿಣಾಮವಾಗಿ ಸವಾರ ಇರ್ಫಾನ್‌ನ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಬಸ್‌ಗೆ ಹಿಂಬದಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡ ಇರ್ಫಾನ್‌ರನ್ನು ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story