ಮೂರನೇ ಮಹಡಿಯಿಂದ ಬಿದ್ದು ಹೊಟೇಲ್ ಕಾರ್ಮಿಕನಿಗೆ ಗಾಯ
ಸುರತ್ಕಲ್: ಹೊಟೇಲ್ ನೌಕರರೊಬ್ಬರು ಆಯಾ ತಪ್ಪಿ ಹೋಟೇಲ್ ನ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಪುರ ಎಂಬಲ್ಲಿ ವರದಿಯಾಗಿದೆ.
ಗಾಯಗೊಂಡವರನ್ನು ಗಣೇಶಪುರದ ಸುಧಾಮ ಹೋಟೇಲ್ ನಲ್ಲಿ ರೂಮ್ ಭಾಯ್ ಆಗಿ ಕೆಲಸ ಮಾಡುತ್ತಿದ್ದ ರವೀಂದ್ರ ಕುಮಾರ್ ಎಂದು ತಿಳಿದು ಬಂದಿದೆ.
ರವೀಂದ್ರ ಅವರು ಹೊಟೇಲ್ ಸುಧಾಮದಲ್ಲಿ ರೂಮ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ರಾತ್ರಿ 2.30ರ ಸುಮಾರಿಗೆ ಮೂರನೇ ಮಹಡಿಯ 305 ಸಂಖ್ಯೆಯ ಕೊಠಡಿಯನ್ನು ಸ್ವಚ್ಛಗೊಳಿಸಿ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಕಿಟಕಿಗೆ ಯಾವುದೇ ರೀತಿಯ ಗ್ರಿಲ್ಸ್ ಗಳಿಲ್ಲದ ಪರಿಣಾಮ ಅವರು ಕಿಟಕಿಯಲ್ಲಿ ಕುಳಿತಿದ್ದ ವೇಳೆ ಮೈವಾಲಿದಂತಾಗಿ ಮೂರನೇ ಮಹಡಿಯಿಂದ ಬಿದ್ದು, ತನ್ನ ಎರಡು ಕೈಗಳಿಗೆ, ಎರಡು ಕಾಲುಗಳಿಗೆ ಮತ್ತು ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





