ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅವರ ರಾಜೀನಾಮೆ ಪತ್ರದಲ್ಲಿ ಏನಿದೆ?

ಡಾ.ಪಿ.ರವೀಂದ್ರನಾಥ್
ಬೆಂಗಳೂರು: ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅವರು ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ...
''ಪರಿಶಿಷ್ಟ ಜಾತಿ ಹಾಗು ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸುರಕ್ಷತಾ ಘಟಕ ಸ್ಥಾಪಿಸಲು ಸರಕಾರಿ ಆದೇಶ ಹೊರಡಿಸಿ ಎಂದು ನಾನು ಮಾಡಿದ ಮನವಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ತೋರಿಸಿದ ತಾತ್ಸಾರ ಭಾವನೆಯಿಂದ ನನಗೆ ತೀವ್ರ ನೋವಾಗಿದೆ. ನನ್ನನ್ನು ನನ್ನ ಹುದ್ದೆಯಿಂದ ಅವಧಿ ಪೂರ್ವ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ವರ್ಗಾವಣೆ ಮಾಡಲಾಗಿದೆ. ಇದು ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ನಾನು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಕ್ಕೆ ನನಗೆ ಕಿರುಕುಳ ನೀಡಲೆಂದೇ ಹೀಗೆ ವರ್ಗಾವಣೆ ಮಾಡಲಾಗಿದೆ'' ಎಂದು ರಾಜೀನಾಮೆ ಪತ್ರದಲ್ಲಿ ರವೀಂದ್ರನಾಥ್ ಅವರು ಉಲ್ಲೇಖಿಸಿದ್ದಾರೆ.
ಈ ಹಿಂದೆ 2008, 2014 ಹಾಗೂ 2020ರಲ್ಲೂ ರಾಜೀನಾಮೆ ಸಲ್ಲಿಸಿದ್ದ ರವೀಂದ್ರನಾಥ್ ಬಳಿಕ ರಾಜೀನಾಮೆ ಹಿಂಪಡೆದಿದ್ದರು.
ಇತ್ತೀಚೆಗಷ್ಟೇ ಅವರನ್ನು ರಾಜ್ಯ ಪೊಲೀಸರ ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.






