ಮೂದೂರು ಗ್ರಾಮದಲ್ಲಿ ಡೆಂಗ್ ಹೆಚ್ಚಳ; ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡುವಂತೆ ದಸಂಸ ಒತ್ತಾಯ
ಉಡುಪಿ : ಜಡ್ಕಲ್ ಗ್ರಾಪಂ ವ್ಯಾಪ್ತಿಯ ಮುದೂರು ಗ್ರಾಮದಲ್ಲಿ ಕಳೆದ ಎರಡೂವರೆ ತಿಂಗಳುಗಳಿಂದ ಡೆಂಗ್ ರೋಗ ಕಾಣಿಸಿಕೊಂಡಿದ್ದು ಇದೀಗ ವಿಪರೀತ ಮಟ್ಟಕ್ಕೆ ತಲುಪಿ ಇಡೀ ಮುದೂರು ಗ್ರಾಮಸ್ಥರಿಗೆ ಸೊಂಕು ಆವರಿಸಿಕೊಂಡಿದೆ. ಆದುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ರೋಗ ತಡೆಗ ಟ್ಟಲು ತ್ವರಿತ ಗತಿಯಲ್ಲಿ ಸಮಾಲೋಚನೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಗ್ರಾಮದಲ್ಲಿ ರೋಗ ಭಯದ ವಾತಾವರಣ ಉಂಟಾಗಿ ಜನರು ಕಂಗೆಟ್ಟಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸದೆ ಆಸ್ಪತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸದೆ ನಿರ್ಲಕ್ಷ್ಯ ತೋರುತ್ತಿರುವುದು ದುರದೃಷ್ಟಕರ. ರಾಜ್ಯ ಸರಕಾರ ಉಡುಪಿ ಜಿಲ್ಲೆಯಗೆ ಮೂವರು ಘನ ಸಚಿವರನ್ನು ನೀಡಿದ್ದರು ಕೂಡ ಯಾವೊಬ್ಬ ಸಚಿವರು ಕೂಡ ಈ ಬಗ್ಗೆ ಗಮನ ಹರಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಈ ಸರಕಾರಕ್ಕೆ ಬಡ ಜನತೆಯ ಮೇಲಿನ ಕಾಳಜಿ ಏನೆಂಬುದು ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ.
ಉಸ್ತುವಾರಿ ಸಚಿವರು, ಶಾಸಕರು ವಿಶೇಷವಾಗಿ ಗಮನಹರಿಸಿ ರೋಗ ಹರಡುವಿಕೆಯ ಈ ಎರಡು ತಿಂಗಳ ಅವಧಿಯಲ್ಲಿ ವಿಶೇಷ ಪರಿಗಣನೆಯಲ್ಲಿ ಆರೋಗ್ಯ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರೆ ರೋಗ ನಿಯಂತ್ರಣ ಸಾದ್ಯವಾಗುತ್ತಿತ್ತು ಹಾಗು ರೋಗ ಪ್ರಾರಂಬಿಕ ಹಂತ ದಲ್ಲಿಯೇ ಆಡಳಿತ ವ್ಯವಸ್ಥೆ ಎಚ್ಚೆತ್ತು ರೋಗ ನಿಯಂತ್ರಣ ಇನ್ನಷ್ಟು ಚುರುಕಾಗು ತ್ತಿತ್ತು ಎನ್ನುವುದು ಜನರ ಆಶಯವಾಗಿತ್ತು.
ಜಿಲ್ಲೆಯ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ರೋಗ ಪೀಡಿತ ಕುಟುಂಬಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಎಲ್ಲ ರೀತಿಯ ನೆರವು ಒದಗಿಸಲು ಕ್ರಮಕೈಗೊಳ್ಳದಿದ್ದಲ್ಲಿ ಸಚಿವರ ಜನವಿರೋಧಿ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಜಿಲ್ಲಾ ಪ್ರದಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರ್, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಬೈಂದೂರು ತಾಲೂಕು ಸಂಚಾಲಕ ನಾಗರಾಜ್ ಉಪ್ಪುಂದ ಪ್ರಕಟಣೆ ಯಲ್ಲಿ ಎಚ್ಚರಿಕೆ ನೀಡಿದ್ದಾರೆ.







