ಪ್ರವಾಸಿಗರಿಂದ ಮಲ್ಪೆ ಬೀಚ್ ಲೈಫ್ ಗಾರ್ಡ್ಗಳಿಗೆ ಹಲ್ಲೆ : ದೂರು

ಸಾಂದರ್ಭಿಕ ಚಿತ್ರ
ಮಲ್ಪೆ : ಮಲ್ಪೆ ಬೀಚ್ನಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದ ಲೈಫ್ಗಾರ್ಡ್ಗಳಿಗೆ ಹಲ್ಲೆ ನಡೆಸಿದ ಪ್ರವಾಸಿಗರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 9ರಂದು ಅಪರಾಹ್ನ ಸುಮಾರು 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್ಗಾರ್ಡ್ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದರು. ಅಲ್ಲದೆ ಇವರು ಲೈಫ್ಗಾರ್ಡ್ಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಲೈಫ್ಗಾರ್ಡ್ ಗಳಾದ ನಾಗರಾಜ, ಅಭಯ್, ರಾಜೇಶ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಇದರಿಂದ ಗಾಯಗೊಂಡ ಲೈಫ್ಗಾರ್ಡ್ಗಳನ್ನು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗಿದೆ.
Next Story