ಲಂಚ ಪಡೆಯವಾಗ ಎಸಿಬಿ ಬಲೆಗೆ ಬಿದ್ದ ಮೈಸೂರು ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರೊಬ್ಬರು ಲಂಚ ಪಡೆಯವಾಗ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಬಲಯ ಕಚೇರಿ 4ರ ಜೆ.ಇ. ಗುರುಸಿದ್ದಯ್ಯ ಅವರು ಮಂಗಳವಾರ ಮಹಿಳೆಯೊಬ್ಬರಿಂದ 3 ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಗೋಕುಲಂ 2ನೇ ಹಂತದ ಮನೆಯೊಂದಕ್ಕೆ ಪ್ಲಾನ್ ಮಂಜೂರು ಮಾಡಲು ಮಹಿಳೆಯೊಬ್ಬರಿಂದ ಗುರುಸಿದ್ದಯ್ಯ 6ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈಗಾಗಲೇ ಮಹಿಳೆ 3 ಸಾವಿರ ರೂ. ನೀಡಿದ್ದರು. ಗುರುಸಿದ್ದಯ್ಯ ವರ್ತನೆಯಿಂದ ಬೇಸತ್ತ ಮಹಿಳೆ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರಿಂದ ಜಾಗೃತರಾದ ಎಸಿಬಿ ಅಧಿಕಾರಿಗಳು ಗುರುಸಿದ್ದಯ್ಯ ಅವರನ್ನು ಬಲೆಗೆ ಬೀಳಿಸಲು ಹಣೆದ ಬಲೆಗೆ ಗುರುಸಿದ್ದಯ್ಯ ತಮ್ಮ ಕಚೇರಿಯಲ್ಲಿ ಮಹಿಳೆಯಿಂದ 3 ಸಾವಿರ ರೂ. ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
Next Story





