Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಟಿವಿ ಚಾನೆಲ್‌ಗಳ ಶಬ್ದ ಮಾಲಿನ್ಯಗಳಿಂದ...

ಟಿವಿ ಚಾನೆಲ್‌ಗಳ ಶಬ್ದ ಮಾಲಿನ್ಯಗಳಿಂದ ನಾಡನ್ನು ರಕ್ಷಿಸುವವರು ಯಾರು?

ವಾರ್ತಾಭಾರತಿವಾರ್ತಾಭಾರತಿ11 May 2022 9:38 AM IST
share
ಟಿವಿ ಚಾನೆಲ್‌ಗಳ ಶಬ್ದ ಮಾಲಿನ್ಯಗಳಿಂದ ನಾಡನ್ನು ರಕ್ಷಿಸುವವರು ಯಾರು?

ಭಾರತ ಶಬ್ದ ಮಾಲಿನ್ಯಗಳಿಗಾಗಿ ವಿಶ್ವದಲ್ಲೇ ಅತಿ ಹೆಚ್ಚು ಸುದ್ದಿಯಲ್ಲಿದೆ. ಇಲ್ಲಿ ಶಬ್ದಮಾಲಿನ್ಯ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಲ್ಲ. ಹಬ್ಬಗಳೆನ್ನುವುದು ಶಬ್ದ ಮತ್ತು ವಾಯು ಮಾಲಿನ್ಯಗಳೆರಡರ ಸಮ್ಮಿಶ್ರಣವಾಗಿದೆ. ಇದೇ ಸಂದರ್ಭದಲ್ಲಿ ಆಗಾಗ ಘೋಷಣೆಯಾಗುವ ಚುನಾವಣೆಗಳು ಶಬ್ದ ಮಾಲಿನ್ಯ ಮಾತ್ರವಲ್ಲ, ವಿಷ ಮಾಲಿನ್ಯಗಳಿಗಾಗಿಯೂ ಕುಖ್ಯಾತವಾಗಿವೆ. ಸಮಾಜದ ಆರೋಗ್ಯದ ಮೇಲೆ ಅದು ಮಾಡಿರುವ ದುಷ್ಪರಿಣಾಮಗಳು ಹತ್ತು ಹಲವು. ಹಬ್ಬಗಳ ಸಂದರ್ಭದಲ್ಲಿ ಸಿಡಿಸಲ್ಪಡುವ ಪಟಾಕಿಯ ಗಂಧಕಕ್ಕಿಂತಲೂ ಈ ಚುನಾವಣೆಯ ಶಬ್ದ ಮಾಲಿನ್ಯ ಮಾರಕವಾಗಿದೆ. ಆದರೆ ಈ ಎಲ್ಲ ಶಬ್ದ ಮಾಲಿನ್ಯಗಳಿಗಿಂತ ಅತ್ಯಂತ ಹೊಲಸು ಮತ್ತು ವಿಷಕಾರಿಯಾಗಿರುವ ಮಾಲಿನ್ಯ ತಾನು ಎನ್ನುವುದನ್ನು ನಾಡಿನ ಕೆಲವು ಟಿವಿ ಚಾನೆಲ್‌ಗಳು ಸೋಮವಾರ ಸಾಬೀತುಪಡಿಸಿದವು.

ತನ್ನ ಭಾಷಣಗಳ ಮೂಲಕ ಸಮಾಜಕ್ಕೆ ವಿಷ ಬೆರೆಸುತ್ತಾ ಓಡಾಡುವ ಪ್ರಮೋದ್ ಮುತಾಲಿಕ್ ಎಂಬ ಶಂಕಿತ ಉಗ್ರ ಮತ್ತು ಆತನ ಸಂಘಟನೆಯಾಗಿರುವ ರಾಮಸೇನೆ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಜೀವಂತವಾಗಿದೆ. ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿ ಕೋಮುಗಲಭೆಗಳಿಗೆ ಸಂಚು ರೂಪಿಸಿದ ಹೆಮ್ಮೆ ಈ ರಾಮಸೇನೆ ಸಂಘಟನೆಯದು. ಇಷ್ಟೇ ಅಲ್ಲ, ಪ್ರಮೋದ್ ಮುತಾಲಿಕ್‌ನಿಗೆ ಬಿಜೆಪಿ ನೇತೃತ್ವದ ಗೋವಾ ಸರಕಾರ ನಿಷೇಧ ಹೇರಿದೆ. ಅಲ್ಲಿಗೆ ಕಾಲಿಡುವುದಕ್ಕೂ ಆತನಿಗೆ ಅವಕಾಶವಿಲ್ಲ. ಇಂತಹ ಕಾನೂನು ಬಾಹಿರ ಮನುಷ್ಯನೊಬ್ಬನ ನೇತೃತ್ವದಲ್ಲಿ ಕಾನೂನು ಬಾಹಿರ ಧ್ವನಿವರ್ಧಕಗಳ ವಿರುದ್ಧ ಪ್ರತಿಭಟನೆ ನಡೆಯುತ್ತದೆ ಎನ್ನುವುದೇ ಒಂದು ವಿಪರ್ಯಾಸ. ಇಂತಹದೊಂದು ವಿಕಟ ನಾಟಕಕ್ಕೆ ಕರ್ನಾಟಕ ಸಾಕ್ಷಿಯಾಗಬೇಕಾಯಿತು ಮಾತ್ರವಲ್ಲ, ಈತನ ಈ ಕಾರ್ಯಕ್ರಮವನ್ನೇ ಹಗಲಿರುಳು ಭಜಿಸಿದ ಕೆಲವು ಟಿವಿ ಚಾನೆಲ್‌ಗಳು ತಮ್ಮ ದೈನೇಸಿ ಸ್ಥಿತಿಯನ್ನು ಕೂಡ ಬಟಾಬಯಲು ಗೊಳಿಸಿದವು. ಸುಪ್ರಭಾತದ ಮಾಧುರ್ಯದ ಲಯದೊಂದಿಗೆ ಬದುಕನ್ನು ಹಲವು ದಶಕಗಳಿಂದ ಆರಂಭಿಸುತ್ತಾ ಬಂದ ಜನತೆಗೆ ಈ ಮನುಷ್ಯನ ಬಾಯಿಯಿಂದ ಸುಪ್ರಭಾತವನ್ನು ಕೇಳುವಂತಹ ಅಸಹನೀಯ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಯಿತು. ಏಕ ಕಾಲದಲ್ಲಿ ಈತ ಕಾನೂನನ್ನು , ಹಿಂದೂ ಧರ್ಮವನ್ನು ಅಣಕಿಸುತ್ತಿರುವಾಗ, ರಾಜ್ಯ ಸರಕಾರ ಈತನ ಬೇಡಿಕೆಯನ್ನು ರಾಜ್ಯದ ಸರ್ವಜನತೆಯ ಬೇಡಿಕೆಯೋ ಎಂಬಂತೆ ಪರಿಗಣಿಸಿ ಅದಕ್ಕೆ ಪರಿಹಾರ ನೀಡಲು ಮುಂದಾಯಿತು.

ವಿಪರ್ಯಾಸ ಇಲ್ಲಿಗೇ ಮುಗಿಯುವುದಿಲ್ಲ. ಸೋಮವಾರದಂದು ಪೊಲೀಸರು ಯಾವನೋ ಒಬ್ಬ ಕ್ರಿಮಿನಲ್‌ನನ್ನು ಮಾರಕಾಸ್ತ್ರದ ಜೊತೆಗೆ ಬಂಧಿಸಲಾಯಿತು. ಬಂಧಿತ ಆರೋಪಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯೆನ್ನುವುದು ಗೊತ್ತಾಗುತ್ತಿದ್ದಂತೆಯೇ ಕೆಲವು ಟಿವಿ ಚಾನೆಲ್‌ಗಳು ಪ್ರಮೋದ್ ಮುತಾಲಿಕ್‌ಗಿಂತಲೂ ಕೀಳು ಮಟ್ಟದ ಕರ್ಕಶ ಧ್ವನಿಯಲ್ಲಿ ಅರಚಾಡತೊಡಗಿದವು. ಪ್ರಮೋದ್ ಮುತಾಲಿಕ್‌ನ ಧ್ವನಿವರ್ಧಕಕ್ಕೂ ಈ ಮಾರಕಾಯುಧಗಳಿಗೆ ಸಂಬಂಧ ಕಲ್ಪಿಸಿ, ದೇವಾಲಯಗಳನ್ನು ದುಷ್ಕರ್ಮಿಗಳು ಟಾರ್ಗೆಟ್ ಮಾಡಿದ್ದರು ಎಂದು ಅತ್ಯಂತ ಉದ್ವಿಗ್ನಕಾರಿಯಾಗಿ ವದಂತಿಗಳನ್ನು ಬಿತ್ತರಿಸತೊಡಗಿದವು. ಯಾವುದೇ ಮೂಲಗಳಿಲ್ಲದ ಈ ವದಂತಿ ಪೊಲೀಸ್ ಇಲಾಖೆಯನ್ನೇ ಕೆರಳಿಸಿತು. ಅಂತಿಮವಾಗಿ ಡಿಸಿಪಿಯವರೇ ಈ ಚಾನೆಲ್‌ಗಳಿಗೆ ಛೀಮಾರಿ ಹಾಕಬೇಕಾಯಿತು. ಸಾಮಾಜಿಕ ಬದ್ಧತೆ ಬಿಡಿ, ಕನಿಷ್ಠ ನಾಚಿಕೆಯೂ ಇಲ್ಲದ ಈ ಟಿವಿ ಚಾನೆಲ್‌ಗಳು ಪೊಲೀಸ್ ಇಲಾಖೆಯ ಸ್ಪಷ್ಟೀಕರಣದ ಬಳಿಕವೂ ವದಂತಿಗಳನ್ನು ಹರಡುತ್ತಲೇ ಇದ್ದವು. ಬಹುಶಃ ನಾಡಿನಲ್ಲಿ ಕೋಮು ಉದ್ವಿಗ್ನತೆಯನ್ನು ನಿರ್ಮಾಣ ಮಾಡಲು ಪ್ರಮೋದ್ ಮುತಾಲಿಕನಿಗಿಂತಲೂ ಈ ಚಾನೆಲ್‌ಗಳಿಗೇ ಹೆಚ್ಚು ಆಸಕ್ತಿಯಿದ್ದಂತೆ ಇತ್ತು. ಹಿಜಾಬ್, ಹಲಾಲ್, ಜಟ್ಕಾ ಇತ್ಯಾದಿಗಳು ತಣ್ಣಗಾದ ಬಳಿಕ ನಿರುದ್ಯೋಗಿಗಳಾಗಿದ್ದ ಈ ಟಿವಿ ಚಾನೆಲ್‌ಗಳ ಆ್ಯಂಕರ್‌ಗಳಿಗೆ ಪ್ರಮೋದ್ ಮುತಾಲಿಕ್ ಎನ್ನುವ ಕ್ರಿಮಿನಲ್ ಹಿನ್ನೆಲೆಯಿರುವ ನಾಯಕ, ದೇಶದ ಸ್ವಾತಂತ್ರ ಹೋರಾಟಗಾರನಾಗಿ ಕಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. 'ನಾಯಿ ಹಸಿದಿತ್ತು, ಅನ್ನ ಹಳಸಿತ್ತು' ಎನ್ನುವ ಗಾದೆಯಂತೆ ಹಸಿದು ಕೂತಿದ್ದ ಈ ಚಾನೆಲ್‌ಗಳಿಗೆ ಪ್ರಮೋದ್ ಮುತಾಲಿಕ್ ಎನ್ನುವ ಹಳಸಿದ ಅನ್ನ ಪಂಚಾಮೃತದಂತೆ ಕಂಡಿತು. ಇಂದು ಧ್ವನಿಮಾಲಿನ್ಯದ ಬಗ್ಗೆ ಈ ದೇಶ ಪ್ರಾಮಾಣಿಕವಾಗಿ ಹೋರಾಟಕ್ಕೆ ಇಳಿಯುತ್ತದೆಯಾದರೆ, ಮೊತ್ತ ಮೊದಲು ಸ್ಥಗಿತಗೊಳ್ಳುವುದು ಈ ಟಿವಿ ಚಾನೆಲ್‌ಗಳ ಅರಚಾಟ. ಇದು ಬರೇ ಧ್ವನಿಮಾಲಿನ್ಯ ಮಾತ್ರವಲ್ಲ, ಈ ಧ್ವನಿಯ ಮೂಲಕ ಸಮಾಜಕ್ಕೆ ದ್ವೇಷದ ವಿಷವನ್ನು ಹಂಚುತ್ತಿವೆ. ಹಾಗೆಯೇ ಪ್ರಮೋದ್ ಮುತಾಲಿಕ್ ಮತ್ತು ಆತನ ಪಟಾಲಂ ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಧ್ವನಿವರ್ಧಕಗಳನ್ನು ದುರ್ಬಳಕೆ ಮಾಡುವುದಕ್ಕೂ ಕಡಿವಾಣ ಬೀಳಬಹುದು.

ಉಳಿದಂತೆ ಧ್ವನಿವರ್ಧಕ ಬಳಕೆಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಯಾವುದೇ ಧರ್ಮಕ್ಕೆ ಸಮಸ್ಯೆಯಾಗುವುದಿಲ್ಲ. ಯಾಕೆಂದರೆ, ಎಲ್ಲ ಧರ್ಮಗಳು ಹುಟ್ಟಿ ಬೆಳೆದು ಬಂದಿರುವುದು ಧ್ವನಿವರ್ಧಕಗಳಿಲ್ಲದ ಕಾಲದಲ್ಲೇ. ಇದೀಗ ಅಝಾನ್, ಸುಪ್ರಭಾತ, ಇನ್ನಿತರ ಭಜನೆಗಳಿಂದ ನಿಜಕ್ಕೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆಯೆಂದರೆ ಸುಪ್ರೀಂಕೋರ್ಟ್ ಹಾಕಿಕೊಟ್ಟ ಚೌಕಟ್ಟಿನಲ್ಲಿ ಧ್ವನಿವರ್ಧಕ ಗಳನ್ನು ಬಳಸುವುದು ಅತ್ಯಗತ್ಯವಾಗಿದೆ. ಇದು ಕೇವಲ ಧಾರ್ಮಿಕ ಸ್ಥಳಗಳಿಗಷ್ಟೇ ಅಲ್ಲ, ಪ್ರಮೋದ್ ಮುತಾಲಿಕ್‌ನಂತಹ ವ್ಯಕ್ತಿಗಳು ಸಾರ್ವಜನಿಕವಾಗಿ ಮೈಕ್ ಕಟ್ಟಿ ಭಾಷಣ ಮಾಡುವಾಗಲೂ ಅನ್ವಯವಾಗಬೇಕು. ಧ್ವನಿವರ್ಧಕ ಬಳಕೆಗೆ ಸರಕಾರ ಮಾರ್ಗಸೂಚಿಯನ್ನು ಹೊರಡಿಸಿದ್ದು ಸಮಂಜಸವಾಗಿದೆ. ಆದರೆ ಈ ಮಾರ್ಗಸೂಚಿ ನಿರ್ದಿಷ್ಟ ಸಮುದಾಯಕ್ಕಷ್ಟೇ ಅನ್ವಯವಾಗದೇ ಎಲ್ಲ ಧರ್ಮ, ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳಿಗೂ ಅನ್ವಯವಾಗಬೇಕು. ದೇವರನ್ನು ಬಹಿರಂಗ ಗದ್ದಲಗಳಿಂದ ಹತ್ತಿರ ಮಾಡಲು ಸಾಧ್ಯವಿಲ್ಲ. ಅವನು ಅಂತರಂಗದ ವೌನಕ್ಕೆ ಒಲಿಯುವವನು. ಪಟಾಕಿಯ ಸದ್ದಿಗಿಂತ, ಹಣತೆಯ ಬೆಳಕು ಆತನಿಗೆ ಇಷ್ಟ. ಇದನ್ನು ಅರ್ಥ ಮಾಡಿಕೊಂಡು ಸರ್ವ ಧರ್ಮೀಯರು ಕಾನೂನಿನ ಸೂಚನೆಗಳಿಗೆ ತಲೆಬಾಗಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X