ವಿಟ್ಲ: ಅಣ್ಣನಿಂದ ತಮ್ಮನ ಕೊಲೆ

ಬಂಟ್ವಾಳ : ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣ ತಮ್ಮನನ್ನು ಕೊಲೆ ಮಾಡಿದ ಘಟನೆ ಸಂಭವಿಸಿದೆ.
ನಂದರಬೆಟ್ಟು ಬಾಳಪ್ಪ ನಾಯ್ಕ(35) ಮೃತಪಟ್ಟವರು.
ನಂದರಬೆಟ್ಟು ಐತ್ತಪ್ಪ ನಾಯ್ಕ(40) ನೊಗದಿಂದ ಬಡಿದು ಬಾಳಪ್ಪ ನಾಯ್ಕ ಅವರನ್ನು ಕೊಲೆ ಮಾಡಿದ್ದಾನೆ ಎಂದು ದೂರಲಾಗಿದೆ.
ಕಂಠಪೂರ್ತಿ ಕುಡಿದ ಮತ್ತಿನಿಂದ ಅಣ್ಣ ತಮ್ಮಂದಿರೊಳಗೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಯಿತೆಂದು ತಿಳಿದುಬಂದಿದೆ.
ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Next Story





