ಮೇ 14,15: ಐಸಿಎಸ್‌ಐ ಸಂಸ್ಥೆಯ ಸಮ್ಮೇಳನ
ಮಂಗಳೂರು : ಭಾರತೀಯ ವಾಣಿಜ್ಯ ಸಂಸ್ಥೆಯ ಕಾರ್ಯದರ್ಶಿಗಳ ಮಂಗಳೂರು ಶಾಖೆಯ ಆಶ್ರಯದಲ್ಲಿ ೨ ದಿನ ಅವಧಿಯ ಕರ್ನಾಟಕ ರಾಜ್ಯ ಸಮಾವೇಶವು ನಗರದ ಹೋಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮೇ ೧೪, ೧೫ ರಂದು ನಡೆಯಲಿದೆ.
ಮೆಸ್ಕಾಂ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಸಮಾವೇಶವನ್ನು ಉದ್ಘಾಟಿಸುವರು. ಸಮ್ಮೇಳನದಲ್ಲಿ ರಾಜ್ಯದ ೨೫೦ ಪ್ರತಿನಿಧಿಗಳು ಭಾಗವಹಿಸುವರು ಎಂದು ಮಂಗಳೂರು ಸಂಸ್ಥೆಯ ಅಧ್ಯಕ್ಷ ಆಕ್ಷಯ್ ಆರ್.ಶೇಟ್ ತಿಳಿಸಿದ್ದಾರೆ.
Next Story