ಭಾರತೀಯ ಚಲನಚಿತ್ರ ಸಂಗೀತ ಭಾರತೀಯ-ಪಾಶ್ಚಿಮಾತ್ಯ ಸಂಪ್ರದಾಯಗಳ ಸಂಗಮ: ರಂಗ ಪೈ
![ಭಾರತೀಯ ಚಲನಚಿತ್ರ ಸಂಗೀತ ಭಾರತೀಯ-ಪಾಶ್ಚಿಮಾತ್ಯ ಸಂಪ್ರದಾಯಗಳ ಸಂಗಮ: ರಂಗ ಪೈ ಭಾರತೀಯ ಚಲನಚಿತ್ರ ಸಂಗೀತ ಭಾರತೀಯ-ಪಾಶ್ಚಿಮಾತ್ಯ ಸಂಪ್ರದಾಯಗಳ ಸಂಗಮ: ರಂಗ ಪೈ](/images/placeholder.jpg)
ಮಣಿಪಾಲ : ಭಾರತೀಯ ಚಲನಚಿತ್ರ ಸಂಗೀತವು ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯಗಳ ನಿಜ ವಾದ ಸಂಯೋಗವಾಗಿದೆ ಮತ್ತು ನಿಜ ಅರ್ಥದಲ್ಲಿ ಒಂದು ರೀತಿಯ ‘ಪರಿಕಲ್ಪನಾ ಸಮ್ಮಿಳನ’ವನ್ನು ಸಾಧಿಸಿದೆ ಎಂದು ಹಿರಿಯ ಸಂಗೀತಜ್ಞ ಟಿ.ರಂಗ ಪೈ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಿದ್ಯಾರ್ಥಿ ಗಳೊಂದಿಗೆ ಸಂಗೀತದ ಕುರಿತಂತೆ ಸಂವಾದ ನಡೆಸುತ್ತಾ ಅವರು ಮಾತನಾಡುತಿದ್ದರು.
‘ಫ್ಯೂಶನ್’ ಸಂಗೀತವನ್ನು ರಚಿಸುವ ಹಲವಾರು ಪ್ರಯತ್ನಗಳು ನಡೆದಿದ್ದರೂ ‘ಫ್ಯೂಶನ್’ ಸಂಗೀತದ ಅತ್ಯುತ್ತಮ ಮತ್ತು ಶ್ರೇಷ್ಠ ಉದಾಹರಣೆಯೆಂದರೆ ಭಾರತೀಯ ಚಲನಚಿತ್ರ ಸಂಗೀತ. ಎರಡೂ ಸಂಗೀತ ಸಂಪ್ರದಾಯಗಳು ಇಲ್ಲಿ ಕೂಡುತ್ತದೆ ಎಂದು ಅವರು ಹೇಳಿದರು.
ಭಾರತೀಯ ಸಂಗೀತದ ವಿಶೇಷತೆ ರಾಗ ಪದ್ಧತಿ. ಹಾಗೆಯೇ ಹಾರ್ಮೋನಿಕ್ಸ್ ಪಾಶ್ಚಾತ್ಯ ಸಂಗೀತವನ್ನು ವ್ಯಾಖ್ಯಾನಿಸುತ್ತದೆ. ಈ ಎರಡು ಪರಿಕಲ್ಪನೆಗಳು ಸಿನಿಮಾ ಸಂಗೀತದಲ್ಲಿ ಒಂದಾಗುವುದನ್ನು ನಾವು ನೋಡ ಬಹುದು ಎಂದು ಅವರು ವಿವರಿಸಿದರು.
ಪೈ ಅವರು ಸಂಗೀತದ ಮೂಲಭೂತ ಪರಿಕಲ್ಪನೆಗಳನ್ನು ವಿವರಿಸುತ್ತಾ, ಎ ರಾತೇ, ಎ ಮೌಸಮ್ ಮತ್ತು ಜಬ್ ದೀಪ್ ಜಲೇ ಆನಾ ಸೇರಿದಂತೆ ಅನೇಕ ಅರೆ-ಶಾಸ್ತ್ರೀಯ ಮತ್ತು ಚಲನಚಿತ್ರ ಗೀತೆಗಳನ್ನು ವಯೋಲಿನ್ನಲ್ಲಿ ನಿರೂಪಿಸುವ ಮೂಲಕ ಪ್ರದರ್ಶಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.