ಶ್ರೀಲಂಕಾ: ದುಷ್ಕರ್ಮಿಗಳಿಗೆ ಗುಂಡಿಕ್ಕಲು ಪೊಲೀಸರಿಗೆ ಸೂಚನೆ
ಕೊಲಂಬೊ, ಮೇ 11: ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಎಸಗುವುದನ್ನು ಮತ್ತು ಲೂಟಿ ಮಾಡುವುದನ್ನು ತಡೆಯಲು ಲೂಟಿಗೋರರ ಮೇಲೆ ಗುಂಡು ಹಾರಿಸಲು ತಮಗೆ ಆದೇಶಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ಬುಧವಾರ ಹೇಳಿದ್ದಾರೆ. ಇದೇ ರೀತಿಯ ಆದೇಶವನ್ನು ಶ್ರೀಲಂಕಾದ ಸೇನೆಗೆ ಮಂಗಳವಾರ ನೀಡಲಾಗಿದೆ.
ಶ್ರೀಲಂಕಾದಲ್ಲಿ ಸೋಮವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಟ 9 ಮಂದಿ ಬಲಿಯಾಗಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
Next Story