ಅಮೆರಿಕ: 1000 ಪೌಂಡ್ ತೂಕದ ಬಿಳಿ ಶಾರ್ಕ್ ಪತ್ತೆ
ವಾಷಿಂಗ್ಟನ್, ಮೇ 11: ಐರನ್ಬೌಂಡ್ ಎಂದೇ ಹೆಸರಾಗಿರುವ 1000 ಪೌಂಡ್ ತೂಕದ ಬೃಹತ್ ಬಳಿ ಶಾರ್ಕ್ ಪೂರ್ವ ಅಮೆರಿಕದ ನ್ಯೂಜೆರ್ಸಿ ಕಡಲತೀರದ ಬಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಬೃಹತ್ ಶಾರ್ಕ್ನ ಉದ್ಧ 12 ಅಡಿ 4 ಇಂಚು ಆಗಿದ್ದು ಸುಮಾರು 452 ಕಿ.ಗ್ರಾಂ ತೂಕ ಹೊಂದಿದೆ ಎಂದು ಸಮುದ್ರ ಸಂಬಂಧಿ ಸಂಶೋಧಕರ ತಂಡ ಓಸಿಯಾರ್ಚ್ ಮಾಹಿತಿ ನೀಡಿದೆ.
ಪುರುಷ ಶಾರ್ಕ್ 2019ರಲ್ಲಿ ಪ್ರಥಮ ಬಾರಿಗೆ ಕೆನಡಾದ ನೋವಾ ಸ್ಕೋಟಿಯಾ ಕಡಲ ತೀರದಲ್ಲಿ ಕಂಡುಬಂದಿತ್ತು. ನೋವಾ ಸ್ಕೋಟಿಯ ತೀರದ ಬಳಿಯ ವೆಸ್ಟ್ ಐರನ್ಬೌಂಡ್ ದ್ವೀಪದ ಹೆಸರನ್ನು ಈ ಶಾರ್ಕ್ಗೆ ಇಡಲಾಗಿದೆ. ಇದುವರೆಗೆ ಪತ್ತೆಯಾಗಿರುವ ಶಾರ್ಕ್ಗಳಲ್ಲಿ ಐರನ್ಬೌಂಡ್ ಶಾರ್ಕ್ಗಳು ಅತ್ಯಂತ ಕಠಿಣ ಶಾರ್ಕ್ಗಳಾಗಿವೆ ಎಂದು ಓಸಿಯಾರ್ಚ್ ಹೇಳಿದೆ.
ನ್ಯೂಜೆರ್ಸಿಯಲ್ಲಿ ಪತ್ತೆಯಾದ ಬೃಹತ್ ಶಾರ್ಕ್ಗೆ ಸುಮಾರು 20 ವರ್ಷವಾಗಿರಬಹುದು. ತಂಡವು ಈ ಹಿಂದೆ ಸುಮಾರು 4000 ಪೌಂಡ್ ತೂಕದ, 17.5 ಅಡಿ ಉದ್ದದ ಶಾರ್ಕ್ ಅನ್ನೂ ಪತ್ತೆಹಚ್ಚಿದೆ ಎಂದು ಓಸಿಯಾರ್ಚ್ನ ಮುಖ್ಯ ವಿಜ್ಞಾನಿ ಬಾಬ್ ಹ್ಯೂಟರ್ ಹೇಳಿದ್ದಾರೆ.
Next Story