ಸ್ಟ್ಯಾನ್ ಫೋರ್ಡ್ ವಿವಿಯ ನೂತನ ಸಂಸ್ಥೆಯ ಡೀನ್ ಆಗಿ ಭಾರತೀಯ ಅಮೆರಿಕನ್ ನೇಮಕ
ವಾಷಿಂಗ್ಟನ್, ಮೇ 11: ಅಮೆರಿಕದ ಸ್ಟ್ಯಾನ್ ಫೋರ್ಡ್ ವಿವಿಯ ಆಶ್ರಯದಲ್ಲಿ ನೂತನವಾಗಿ ಆರಂಭಿಸಲಾಗಿರುವ ಹವಾಮಾನ ಬದಲಾವಣೆ ಸಂಸ್ಥೆಯ ಡೀನ್ ಆಗಿ ಭಾರತೀಯ ಅಮೆರಿಕನ್ ವಿಜ್ಞಾನಿ, ಇಂಜಿನಿಯರ್ ಮತ್ತು ಪ್ರೊಫೆಸರ್ ಅರುಣ್ ಮಜೂಮ್ದಾರ್ ನೇಮಕಗೊಂಡಿದ್ದಾರೆ. ಹವಾಮಾನ ಬದಲಾವಣೆ ಮತ್ತು ಸಮರ್ಥನೀಯತೆಯ ವಿಷಯದ ಅಧ್ಯಯನವನ್ನು ಕೇಂದ್ರೀಕರಿಸಿರುವ ‘ಸ್ಟ್ಯಾನ್ ಫೋರ್ಡ್ ಡೊಯೆರ್ ಸ್ಕೂಲ್ ಆಫ್ ಸಸ್ಟೈನಿಬಿಲಿಟಿ’ಯ ಪ್ರಥಮ ಡೀನ್ ಆಗಿ ಮಜೂಮ್ದಾರ್ ನೇಮಕಗೊಂಡಿದ್ದಾರೆ.
ಜಾಗತಿಕ ಹವಾಮಾನ ಬಿಕ್ಕಟ್ಟಿಗೆ ಕ್ಷಿಪ್ರ ಪರಿಹಾರ ಕಂಡುಹುಡುಕುವ ಉದ್ದೇಶದ ಈ ಶಾಲೆ ಸೆಪ್ಟಂಬರ್ 1ರಿಂದ ಆರಂಭವಾಗಲಿದೆ ಎಂದು ಸ್ಟ್ಯಾನ್ಫೋರ್ಡ್ ನ್ಯೂಸ್ ವರದಿ ಮಾಡಿದೆ. ಈಗ ಪ್ರಿಕೋರ್ಟ್ ಇನ್ಸ್ಟಿಟ್ಯೂಟ್ ಆಫ್ ಎನರ್ಜಿಯಲ್ಲಿ ಪ್ರೊಫೆಸರ್ ಆಗಿರುವ ಕೋಲ್ಕತ ಮೂಲದ ಅರುಣ್ ಮಜುಮ್ದಾರ್ ಜೂನ್ 15ರಂದು ಹುದ್ದೆ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
Next Story