ಟೇಕಾಫ್ ಆಗುವ ವೇಳೆ ರನ್ವೇಯಲ್ಲಿ ಚೀನಾದ ವಿಮಾನಕ್ಕೆ ಬೆಂಕಿ: ಕನಿಷ್ಟ 25 ಮಂದಿಗೆ ಗಾಯ
Photo:twitter
ಬೀಜಿಂಗ್, ಮೇ 12 : 122 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾದ ಟಿಬೆಟ್ ಏರ್ಲೈನ್ಸ್ನ ಪ್ರಯಾಣಿಕ ವಿಮಾನವು ಗುರುವಾರ ದೇಶದ ನೈಋತ್ಯ ಚಾಂಗ್ಕಿಂಗ್ ನಗರದಲ್ಲಿ ಟೇಕಾಫ್ ಆಗುತ್ತಿದ್ದಾಗ ರನ್ವೇಯಿಂದ ಕೆಳಗಿಳಿದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಗಾಯಗೊಂಡಿದ್ದಾರೆ.
ಟಿಬೆಟ್ಗೆ ಹೋಗುತ್ತಿದ್ದ ವಿಮಾನವು 113 ಪ್ರಯಾಣಿಕರು ಹಾಗೂ ಒಂಬತ್ತು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಸರಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನದಲ್ಲಿದ್ದ ಎಲ್ಲಾ ಜನರನ್ನು ಸ್ಥಳಾಂತರಿಸಲಾಯಿತು ಹಾಗೂ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
25 ಮಂದಿ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
Next Story