ಮೇ 14ರಿಂದ ಕಾಪುವಿನಲ್ಲಿ ಸ್ವದೇಶಿ ಮೇಳ-2022
ಕಾಪು : ವಿಶ್ವ ಭಾರತಿ ಕಾಪು ಇದರ ಆಶ್ರಯದಲ್ಲಿ ಕಾಪುವಿನ ಶ್ರೀ ಕಾಳಿಕಾಂಬಾ ದೇವಸ್ಥಾನ ವಠಾರದಲ್ಲಿ ಮೇ 14ರಿಂದ 16ವರೆಗೆ ಮೂರು ದಿನಗಳ ಕಾಲ ಸ್ವದೇಶಿ ಮೇಳ-2022 ನಡೆಯಲಿದೆ.
ಈ ಬಗ್ಗೆ ಕಾಪು ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘಟಕ ಬಾಸುಮ ಕೊಡಗು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ವದೇಶಿ ವಸ್ತುಪ್ರದಶರ್ನ, ಮಾರಾಟ ಮಳಿಗೆಗಳು, ಆಹಾರ ಮಳಿಗೆಗಗಳು, ಕಲಾ ಪ್ರದರ್ಶನ, ಆದರ್ಶ ದಂಪತಿ, ಯುವರತ್ನ, ಎಳೆಯರ ಅಂಗಳ, ಬಾಲಪ್ರತಿಭೆ, ನಾರೀಮಣಿ- ಸಹಿತ ಮೂರು ತಿಂಗಳ ಮಗುವಿನಿಂದ ಎಲ್ಲಾ ವಯೋಮಾನದವರಿಗೂ ವಿವಿಧ ಸ್ವರ್ಧೆಗಳು, ಸಾಧಕರಿಗೆ ಸನ್ಮಾನ, ಪುನೀತ ನಮನ ಗಾಯನ ಕಾರ್ಯಕ್ರಮ, ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ ನಡೆಯಲಿದೆ.
ಮೇ 14ರಂದು ಬೆಳಗ್ಗೆ 9.30ಕ್ಕೆ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಪಡುಕುತ್ಯಾರು ಉದ್ಘಾಟಿಸಲಿದ್ದಾರೆ. ಸಭಾ ಅಧ್ಯಕ್ಷತೆಯಥಿನ್ನು ವಿಶ್ವಭಾರತಿ ಕಾಪು ಅಧ್ಯಕ್ಷ ಶ್ರೀಕಾಂತ ಬಿ. ಆಚಾರ್ಙ ವಹಿಸಲಿದ್ದಾರೆ. ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ, ಅಂತರಾಷ್ಟ್ರಯ ಚತ್ರೋತ್ಸವ ಬಾಲನಟ ಪ್ರಶಸ್ತಿ ವಿಜೇತ ದೃಶಾ ಕೊಡಗು ಇವರನ್ನು ಅಭಿನಂದಿಸಲಾಗುವುದು. ಸಂಜೆ 5.30ಕ್ಕೆ ನಡೆಯಲಿರುವ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವವನ್ನು ಚಿತ್ರ ನಿರ್ದೆಶಕ ಗಿರೀಶ್ ಕಾಸರವಳ್ಳಿ ಉದ್ಘಾಟಿಸಲಿದ್ದಾರೆ.
ವಿಶ್ವಭಾರತಿ ಕಾಪು ಅಧ್ಯಕ್ಷ ಶ್ರೀಕಾಂತ ಬಿ. ಆಚಾರ್ಙ, ಸ್ವದೇಶಿ ಮೇಳ ಸಂಚಾಲಕ ಎಲ್ಲೂರು ಆನಂದ ಕುಂದರ್ ಉಪಸ್ಥಿತರಿದ್ದರು.