Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶ್ರೀಲಂಕಾದ ಆರ್ಥಿಕ ಅಧಃಪತನದ ಹಿಂದೆ ಚೀನಾ...

ಶ್ರೀಲಂಕಾದ ಆರ್ಥಿಕ ಅಧಃಪತನದ ಹಿಂದೆ ಚೀನಾ ನಂಟು ಹೇಗಿದೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ12 May 2022 11:00 PM IST
share
ಶ್ರೀಲಂಕಾದ ಆರ್ಥಿಕ ಅಧಃಪತನದ ಹಿಂದೆ ಚೀನಾ ನಂಟು ಹೇಗಿದೆ ಗೊತ್ತೇ?

   ಕೊಲಂಬೊ, ಮೇ 12: ಆರ್ಥಿಕ ಬಿಕ್ಕಟ್ಟು, ಗಗನಕ್ಕೇರಿದ ಅಗತ್ಯವಸ್ತುಗಳ ಧಾರಣೆ, ನಿರುದ್ಯೋಗ ಹಾಗೂ ಸಾಲದ ಹೊರೆಯಿಂದ ತತ್ತರಿಸಿರುವ ಶ್ರೀಲಂಕಾವು 1948ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ ಪಡೆದ ಬಳಿಕ ಇದೀಗ ಅತ್ಯಂತ ಘೋರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿದೇಶಿ ಕರೆನ್ಸಿ ಕೊರತೆಯಿಂದಾಗಿ  ಪ್ರಮುಖ ಆಹಾರಪದಾರ್ಥಗಳು ಹಾಗೂ ತೈಲದ ಆಮದಿಗೆ ಬೇಕಾದ ವಿದೇಶಿ ವಿನಿಮಯ ಹಣವನ್ನು ಪಾವತಿಸಲು ಅಸಮರ್ಥವಾಗಿದ್ದು, ಇದರಿಂದಾಗಿ ಅವಶ್ಯಕವಸ್ತುಗಳು ಹಾಗೂ ತೈಲದ ತೀವ್ರ ಕೊರತೆಯುಂಟಾಗಿವೆ. ರಾಜಪಕ್ಸ ಸೋದರರ ರಾಜೀನಾಮೆಗೆ ಆಗ್ರಹಿಸಿ ಎಪ್ರಿಲ್ 9ರಿಂದೀಚೆಗೆ ಶ್ರೀಲಂಕಾದ್ಯಂತ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಹಿಂಸಾರೂಪ ಪಡೆದಿದ್ದು, ಸಾವುನೋವುಗಳು ಸಂಭವಿಸಿವೆ ಹಾಗೂ ಅಪಾರ ಪ್ರಮಾಣದ ಸಾರ್ವಜನಿಕ ಸೊತ್ತುಗಳು ನಷ್ಟವಾದಗಿವೆ.

ಶ್ರೀಲಂಕಾದ ಆರ್ಥಿಕ ಅಧಃಪತನಕ್ಕೆ ಆ ದ್ವೀಪರಾಷ್ಟ್ರದಲ್ಲಿ ಚೀನಾದ ಸಾಲದ ನೆರವಿನೊಂದಿಗೆ ಬೃಹತ್ ಪ್ರಮಾಣದಲ್ಲಿ ಮೂಲ ಸೌಕರ್ಯಗಳ ಮೇಲೆ ಹೂಡಿಕೆಗಳನ್ನು ಮಾಡಿದ್ದುದೇ ಕಾರಣವೆಂದು ಪಾಶ್ಚಾತ್ಯ ಸುದ್ದಿಸಂಸ್ಥೆ ಎಎಫ್ಪಿ ವರದಿ ಮಾಡಿದೆ.

 ಶ್ರೀಲಂಕಾವು ಚೀನಾದ ಸಾಲದ ನೆರವನ್ನು ಡೆದುಕೊಂಡು ಪ್ರಶ್ನಾರ್ಹವಾದ ರೀತಿಯಲ್ಲಿ ಮೂಲ ಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ಮಾಡಿತ್ತು. ಶ್ರೀಲಂಕಾದ ಪ್ರಮುಖ ವಿದೇಶಿ ಆದಾಯ ಮೂಲವಾದ ಪ್ರವಾಸೋದ್ಯಮವು ಕೋವಿಡ್ ಹಾವಳಿಯ ಬಳಿಕ ಸಂಪೂರ್ಣವಾಗಿ ಕುಸಿದುಬಿದ್ದಿತ್ತು. ಇದೇ ಸಂದರ್ಭದಲ್ಲಿ ಗೋಟಬಯಾ ಸರಕಾರವು ಚೀನಾದಿಂದ ಸಾಲ ಪಡೆದು ಅದು ಬೃಹತ್ ಮೂಲ ಸೌಕರ್ಯ ಯೋಜನೆಗಳ ಮೇಲೆ ಹೂಡಿಕೆಯನ್ನು ಮಾಡಿತ್ತು. ಈ ಸಾಲದ ಹೊರೆಯು ಆಗಲೇ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.

    ದಕ್ಷಿಣ ಶ್ರೀಲಂಕಾದ ಹಂಬನ್ತೋಟ ಜಿಲ್ಲೆಯಲ್ಲಿ ಚೀನಾ ನೆರವಿನೊಂದಿಗೆ ಸ್ಥಾಪಿಸಲಾದ ಬೃಹತ್ ಆಳ ಸಮುದ್ರ ಬಂದರಿನ ನಿರ್ವಹಣೆಯು ದ್ವೀಪರಾಷ್ಟ್ರಕ್ಕೆ ಭಾರೀ ಹೊರೆಯಾಗಿ ಪರಿಣಮಿಸಿತ್ತು. ಆದು ಕಾರ್ಯಾರಂಭ ಮಾಡಿದ ಆರು ತಿಂಗಳುಗೊಳಗೆ 300 ದಶಲಕ್ಷ ಡಾಲರ್ ನಷ್ಟವನ್ನು ಅನುಭವಿಸಿತು. ಅದರ ಸಮೀಪವೇ ಚೀನಾ ನೆರವಿನ ಬೃಹತ್ ಐಶಾರಾಮಿ ಸೌಧಗಳನ್ನು ಕೂಡಾ ನಿರ್ಮಿಸಲಾಗಿದೆ. ಬೃಹತ್ ಗಾತ್ರದ ಕಾನ್ಫರೆನ್ಸ್ ಸೆಂಟರ್ ಉದ್ಘಾಟನೆಗೊಂಡ ಆನಂತರ ಅದು ಬಳಕೆಯಾಗದೇ ಹೋಗಿದೆ. ಅದೇ ರೀತಿ ಚೀನಾದ ನೆರವಿನೊಂದಿಗೆ ನಿರ್ಮಿಸಲಾದ 200 ಮಿಲಿಯ ಡಾಲರ್ ವೌಲ್ಯದ ವಿಮಾನ ನಿಲ್ದಾಣದ ಆದಾಯವು ಎಷ್ಟು ಕಡಿಮೆಯಿತ್ತೆಂದರೆ, ಅದರ ವಿದ್ಯುತ್ ಶುಲ್ಕವನ್ನು ಪಾವತಿಸಲು ಕೂಡಾ ಸಾಕಾಗುತ್ತಿರಲಿಲ್ಲ.
 ಕಳೆದ ಎರಡು ದಶಕಗಳಿಂದ ಶ್ರೀಲಂಕಾದ ರಾಜಕೀಯದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದ ಪ್ರಭಾವಿ ರಾಜಪಕ್ಸ ಕುಟುಂಬವು ಈ ಎಲ್ಲಾ ಯೋಜನೆಗಳಿಗೆ ಮುತುವರ್ಜಿ ವಹಿಸಿತ್ತು.

ಮಹೀಂದಾ ರಾಜಪಕ್ಸ ಅವರು 2015ರಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದಾಗ ತನ್ನ ಸರಕಾರದ ಮೂಲಸೌಕರ್ಯ ಅಭಿಯಾನದ ಕುರಿತ ಹಗರಣಗಳ ಹಿನ್ನೆಲೆಯಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು. ಮೂಲಸೌಕರ್ಯಗಳ ಗುತ್ತಿಗೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರಗಳ ಆರೋಪಗಳ ಹಿನ್ನೆಲೆಯಲ್ಲಿ ಅವರು ಅಧಿಕಾರ ತ್ಯಜಿಸೇಕಾಯಿತು.
 ನಾಲ್ಕು ವರ್ಷಗಳ ಬಳಿಕ ಅವರ ಕಿರಿಯ ಸಹೋದರ ಗೋಟಬಯಾ ರಾಜಪಕ, ಅವರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ದೇಶವನ್ನು ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವ ಭರವಸೆ ನೀಡಿದರು. 2019ರಲ್ಲಿ ಚರ್ಚ್ಗಳಲ್ಲಿ ನಡೆದ ಬಾಂಬ್ ದಾಳಿಗಳ ಬಳಿಕ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಘೋಷಿಸಿದ್ದರು.
  
ಅಧಿಕಾರ ಸ್ವೀಕರಿಸಿದ ಕೆಲವು ದಿನಗಳೊಳಗೆ ಗೋಟಬಯಾ ಅವರು ಮಹೀಂದ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಿಸಿದುದು ಹಾಗೂ ಶ್ರೀಲಂಕಾದ ಇತಿಹಾಸದಲ್ಲೇ ಬೃಹತ್ ತೆರಿಗೆ ಕಡಿತಗಳನ್ನು ಘೋಷಿಸಿದ್ದರು. ಇದರಿಂದಾಗಿ ದೇಶವನ್ನು ದೀರ್ಘಕಾಲದಿಂದ ಕಾಡುತ್ತಿದ್ದ ಬಜೆಟ್ ಕೊರತೆ ಇನ್ನಷ್ಟು ಶೋಚನೀಯ ಮಟ್ಟಕ್ಕೆ ತಲುಪಿತ್ತು. ಕೋವಿಡ್ 19 ಹಾವಳಿಯ ಬಳಿಕ ದೇಶಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ಅಗಮನವು ಶೂನ್ಯಮಟ್ಟಕ್ಕಿಳಿದಿತ್ತು ಹಾಗೂ ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಶ್ರೀಲಂಕನ್ನರಿಂದ ದೇಶಕ್ಕೆ ಬರುತ್ತಿದ್ದ ವರಮಾನದಲ್ಲೂ ತೀವ್ರ ಕುಸಿತವುಂಟಾದುದು, ಆರ್ಥಿಕತೆಗೆ ಇನ್ನಷ್ಟು ಆಘಾತವನ್ನು ನೀಡಿತು.

ರಸಗೊಬ್ಬರ ನಿಷಧ
   ವಿದೇಶಿ ಮೀಸಲು ನಿಧಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಶ್ರೀಲಂಕಾವು 2021ರಲ್ಲಿ ರಸಗೊಬ್ಬರ ಹಾಗೂ ಇತರ ಕೃಷಿ ರಾಸಾಯನಿಕಗಳಿಗೆ ನಿಷೇಧವನ್ನು ಹೇರಿತ್ತು. ದೇಶವನ್ನು ಜಗತ್ತಿನ ಪ್ರಪ್ರಥಮ ಸಾವಯವ ಕೃಷಿಯ ರಾಷ್ಟ್ರವನ್ನಾಗಿಸುವ ಭಾಗವಾಗಿ ಸರಕಾರವು ಜಾರಿಗೊಳಿಸಿದ ಕ್ರಮಗಳು ಆರ್ಥಿಕತೆಯ ಮೇಲೆ ಅಘಾತಕಾರಿ ಪರಿಣಾಮಗಳನ್ನುಂಟು ಮಾಡಿದವು.
ಇದರಿಂದಾಗಿ ದೇಶದ ಮೂರನೇ ಒಂದರಷ್ಟು ಕೃಷಿ ಜಮೀನುಗಳಲ್ಲಿ ರೈತರು ಕೃಷಿ ಮಾಡದೆ ಹಡೀಲು ಬಿಟ್ಟರು. ಇದರ ಪರಿಣಾಮವಾಗಿ ದೇಶದ ಪ್ರಮುಖ ರಫ್ತು ಆದಾಯ ಮೂಲವಾದ ಚಹಾ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳ ಇಳುವರಿಯಲ್ಲಿ ತೀವ್ರ ಕುಸಿತವುಂಟಾಯಿತು. 2021ರಲ್ಲಿ ಕೃಷಿ ಕಾರ್ಮಿಕರ ತೀವ್ರ ಪ್ರತಿಭಟನೆ ಹಾಗೂ ಆಹಾರವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸಾವಯವ ಕೃಷಿ ನೀತಿಯನ್ನು ಕೈಬಿಡಲಾಯಿತು.

ಮೀಸಲು ನಿಧಿಯಲ್ಲಿ ಕುಸಿತ
 ಮಹೀಂದಾ ರಾಜಪಕ್ಸ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷ ಮೊದಲು 7.5 ಶತಕೋಟಿ ಡಾಲರ್ನಷ್ಟಿದ್ದ ಶ್ರೀಲಂಕಾದ ಮೀಸಲು ನಿಧಿಯು 2.7 ಶತಕೋಟಿ ಡಾಲರ್‌ಗೆ ಕುಸಿದಿತ್ತು.

 ಆಮದು ಸರಕುಗಳನ್ನು ಖರೀದಿಸಲು ವಿದೇಶಿ ಕರೆನ್ಸಿಗಳನ್ನು ಪಡೆಯಲು ವರ್ತಕರು ಪರದಾಡುತ್ತಿರುವಂತೆಯೇ, ಇತ್ತ ಅಕ್ಕಿ, ಸಕ್ಕರೆ , ಹಾಲಿನ ಹುಡಿಯಂತಹ ಆವಶ್ಯಕ ವಸ್ತುಗಳ ಕೊರತೆಯಿಂದ ಶ್ರೀಲಂಕನ್ನರು ಬಾಧಿತರಾದರ. ಪೆಟ್ರೋಲ್, ಸೀಮೆ ಎಣ್ಣೆ ಸೇರಿದಂತೆ ತೈಲ ಬೆಲೆಗಳ ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾದವು. ಇತ್ತ ಕಲ್ಲಿದ್ದಲು ಕೊರತೆಯು ಉಂಟಾಗಿ ವಿದ್ಯುತ್ ಕ್ಷಾಮ ತಲೆದೋರಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X