VIDEO- ಕಾಳಿಸ್ವಾಮಿಗೆ ಮಸಿ ಬಳಿದ ಕನ್ನಡಪರ ಕಾರ್ಯಕರ್ತರು

ಬೆಂಗಳೂರು, ಮೇ.12: ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಕಾಳಿಮಠದ ಋಷಿಕೇಶ ಸ್ವಾಮೀಜಿ ಮುಖಕ್ಕೆ ಕಪ್ಪು ಮಸಿ ಬಳೆದಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚಿಗೆ ನಾಡಪ್ರಭು ಕೆಂಪೇಗೌಡ, ರಾಷ್ಟ್ರ ಕವಿ ಕುವೆಂಪು ಅವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಋಷಿಕೇಶ ಮೇಲೆ ದಾಳಿ ನಡೆಸಿ ಮಸಿ ಬಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ದಾಳಿ ವೇಳೆ ಋಷಿಕೇಶ ಸ್ವಾಮಿಯ ಕಾಲಿಗೆ ಪೆಟ್ಟು ಬಿದ್ದಿದೆ. ಸದ್ಯ ಕಾಳಿ ಅವರು ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.
Next Story





