ಕಾಶ್ಮೀರಿ ಪಂಡಿತನ ಹತ್ಯೆ ಖಂಡಿಸಿ ಬುದ್ಗಾಮ್‌ನಲ್ಲಿ ಪ್ರತಿಭಟನೆ :ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ರಾಹುಲ್ ಭಟ್ ಅವರ ಹತ್ಯೆಯನ್ನು ಖಂಡಿಸಿ ಸರಕಾರಿ ನೌಕರರು ಹಾಗೂ ಕಾಶ್ಮೀರಿ ಪಂಡಿತರ ಕುಟುಂಬಗಳು ಲೆಫ್ಟಿನೆಂಟ್ ಗವರ್ನರ್ ಆಡಳಿತದ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.
ಗುರುವಾರ ಚದೂರ ಪಟ್ಟಣದ ತಹಶೀಲ್ದಾರ್ ಕಚೇರಿಯೊಳಗೆ ಕಾಶ್ಮೀರಿ ಪಂಡಿತ್, ಸರಕಾರಿ ನೌಕರ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2010-11ರಲ್ಲಿ ವಲಸಿಗರಿಗೆ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಭಟ್ ಅವರಿಗೆ ಗುಮಾಸ್ತ ಹುದ್ದೆ ಸಿಕ್ಕಿತ್ತು.
ಶುಕ್ರವಾರದಂದು ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಬದ್ಗಾಮ್‌ನ ಏರ್‌ಪೋರ್ಟ್ ರಸ್ತೆಗೆ ತೆರಳದಂತೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು.
#WATCH Police fire tear gas shells at protestors to prevent them from moving towards the Airport Road in Budgam during their protest demonstration against the recent killings of Kashmiri Pandits in the Union Territory pic.twitter.com/EPHvomqH9j
— ANI (@ANI) May 13, 2022