ಸುರತ್ಕಲ್ | ದೊಡ್ಡ ಕೊಪ್ಪಲು ಸಮುದ್ರ ತೀರದಲ್ಲಿ ತೈಲ ತ್ಯಾಜ್ಯ ಪತ್ತೆ

ಸುರತ್ಕಲ್, ಮೇ 13: ಸುರತ್ಕಲ್ ಸಮೀಪದ ದೊಡ್ಡ ಕೊಪ್ಪಲು ಸಮುದ್ರ ತೀರದಲ್ಲಿ ಶುಕ್ರವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ತೈಲ ತ್ಯಾಜ್ಯ ಕಂಡುಬಂದಿದೆ.
ಸುಮಾರು 2- 3 ಕಿ.ಮೀ. ವ್ಯಾಪ್ತಿಯ ಕಲಡ ಕಿನಾರೆಗೆ ತೈಲದ ಜಿಡ್ಡು ಅಪ್ಪಳಿಸುತ್ತಿದೆ. ಸಮುದ್ರ ಮಾರ್ಗವಾಗಿ ಸಂಚರಿಸುವ ಹಡಗುಗಳು ಅದಲ್ಲಿರುವ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಸಮುದ್ರದಲ್ಲಿ ಮುಳುಗಿರುವ ಹಡಗುಗಳಿಂದಲೂ ಇದು ಬಂದಿರುವ ಸಾಧ್ಯತೆ ಇದೆ.
ಮಂಗಳೂರು ಬಂದರಿನಲ್ಲಿ ಲಂಗರು ಹಾಕುವ ಹಡಗುಗಳು ಬಂದರ್ ನಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ ಬಂದರು ಸೇರುವ ಮುನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Next Story