ಟ್ವಿಟರ್ ಖರೀದಿ ಒಪ್ಪಂದಕ್ಕೆ ತಾತ್ಕಾಲಿಕ ತಡೆ ಎಂದ ಎಲಾನ್ ಮಸ್ಕ್
![ಟ್ವಿಟರ್ ಖರೀದಿ ಒಪ್ಪಂದಕ್ಕೆ ತಾತ್ಕಾಲಿಕ ತಡೆ ಎಂದ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಒಪ್ಪಂದಕ್ಕೆ ತಾತ್ಕಾಲಿಕ ತಡೆ ಎಂದ ಎಲಾನ್ ಮಸ್ಕ್](https://www.varthabharati.in/sites/default/files/images/articles/2022/05/13/334979-1652442032.gif)
ಎಲಾನ್ ಮಸ್ಕ್ (PTI)
ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಖರೀದಿಸುವ 44 ಬಿಲಿಯನ್ ಡಾಲರ್ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಎಲಾನ್ ಮಸ್ಕ್ ಇಂದು ಹೇಳಿದ್ದಾರೆ. ಟ್ವಿಟರ್ ನಲ್ಲಿ ಎಷ್ಟು ಸ್ಪ್ಯಾಮ್ ಮತ್ತು ನಕಲಿ ಖಾತೆಗಳಿಗೆ ಎಂಬ ಕುರಿತ ಲೆಕ್ಕಾಚಾರ ಕುರಿತ ಮಾಹಿತಿಗಳು ಬಾಕಿಯಿವೆ ಎಂದು ಹೇಳಿರುವ ಅವರು ಈ ಸ್ಪ್ಯಾಮ್, ನಕಲಿ ಖಾತೆಗಳು ಶೇ. 5ಕ್ಕಿಂತ ಕಡಿಮೆಯಿರಬಹುದು ಎಂದಿದ್ದಾರೆ.
ಮಸ್ಕ್ ಅವರ ಹೇಳಿಕೆ ಬಗ್ಗೆ ಟ್ವಿಟರ್ ಇನ್ನೂ ಪ್ರತಿಕ್ರಿಯಿಸಿಲ್ಲ ಅಂತೆಯೇ ಮಸ್ಕ್ ಅವರ ಒಡೆತನದ ಟೆಸ್ಲಾ ಸಂಸ್ಥೆಯೂ ಏನನ್ನೂ ಹೇಳಿಲ್ಲ.
ಎಲಾನ್ ಮಸ್ಕ್ ಅವರ ಜತೆಗಿನ ಒಪ್ಪಂದ ಅಂತಿಮಗೊಳ್ಳುವ ತನಕ ಕಂಪೆನಿಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ, ಭವಿಷ್ಯದ ನೀತಿ ಮತ್ತು ತಂತ್ರಗಾರಿಕೆ ಬಗ್ಗೆ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಜಾಹೀರಾತುದಾರರು ಇನ್ನೂ ಟ್ವಿಟರ್ ಮೇಲೆ ಹಣ ವ್ಯಯಿಸುತ್ತಾರೆಯೇ ಎಂಬ ಬಗ್ಗೆಯೂ ಅನಿಶ್ಚಿತತೆಯಿದೆ.
ಟ್ವಿಟರ್ ನ ನಿಯಂತ್ರಣ ನೀತಿಯ ಟೀಕಾಕಾರರಾಗಿರುವ ಮಸ್ಕ್, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಷೇಧವನ್ನೂ ತಾವು ಟ್ವಿಟರ್ ನ ಸಂಪೂರ್ಣ ನಿಯಂತ್ರಣ ಹೊಂದಿದ ಬಳಿಕ ವಾಪಸ್ ಪಡೆಯುವುದಾಗಿ ತಿಳಿಸಿದ್ದರು.
Twitter deal temporarily on hold pending details supporting calculation that spam/fake accounts do indeed represent less than 5% of usershttps://t.co/Y2t0QMuuyn
— Elon Musk (@elonmusk) May 13, 2022