ಡಾ. ರವೀಶ್ ತುಂಗರಿಗೆ ಜಿಂಬಾಬ್ವೆ ಸರ್ಕಾರದಿಂದ ಪ್ರತಿಷ್ಠಿತ ಪ್ರಶಸ್ತಿ

ಮಂಗಳೂರು: ಮನೋರೋಗ ಶಾಸ್ತ್ರಜ್ಞ ಡಾ. ರವೀಶ್ ತುಂಗ ಅವರು ಭಾರತದಲ್ಲಿ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿನ ತಮ್ಮ ಮಹತ್ತರ ಕೊಡುಗೆಗಾಗಿ ಜಿಂಬಾಬ್ವೆ ಸರ್ಕಾರದಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದರು.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಂಬಾಬ್ವೆ ರಾಯಭಾರಿ ಡಾ. ಗಾಡ್‍ಫ್ರೇ ಚಿಪಾರೆ ಅವರು ಈ ಪ್ರಶಸ್ತಿಯನ್ನು ಪ್ರದಾನಿಸಿದರು.
ಜಿಂಬಾಬ್ವೆ ಪ್ರಥಮ ಮಹಿಳೆ ಡಾ. ಆಕ್ಸಿಲಿಯಾ ನಂಗಾಗ್ವ ಹಾಗೂ ಅಲ್ಲಿನ ಸರ್ಕಾರದ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Next Story





