ಮಲಬಾರ್ ಗೋಲ್ಡ್‌ನಿಂದ ವಿಶ್ವ ದಾದಿಯರ ದಿನಾಚರಣೆ

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿ ಯಿಂದ ವಿಶ್ವ ದಾದಿಯರ ದಿನವನ್ನು ಉಡುಪಿ ಮಳಿಗೆ ಯಲ್ಲಿ ಗುರುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ದಾದಿಯರಾಅದ ರೋಸ್ಲಿ ಜತನ್ನ, ಪೂರ್ಣಿಮಾ ಶೆಟ್ಟಿ, ಯಶೋಧ ಅಂಡಾರು, ಯಮುನಾ ಕುಮಾರಿ ಕೆ.ಎ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಲೀಲಾಧರ್ ಶೆಟ್ಟಿ, ಪ್ರೊ.ಶಿವಾನಂದ ನಾಯಕ್, ಡಾ.ರಾಜಲಕ್ಷ್ಮೀ ಮಾತನಾಡಿದರು. ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್,ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು. ವಿಘ್ನೇಶ್ ನಿರೂಪಿಸಿ ವಂದಿಸಿದರು.
Next Story





