ಉಡುಪಿ ಜಿಲ್ಲಾಮಟ್ಟದ ತುಳುನಾಡ ಗೊಬ್ಬುಲು ಸಮಾರೋಪ

ಉಡುಪಿ : ತುಳುಕೂಟ ಉಡುಪಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ ೩೧೭ಸಿ ಮತ್ತು ಇಂದ್ರಾಳಿ-ಉಡುಪಿ ಲಯನ್ಸ್ ಮತ್ತು ಲಿಯೋ ಕ್ಲಬ್ ಇವುಗಳ ಆಶ್ರಯದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ಹಮ್ಮಿಕೊಳ್ಳ ಲಾದ ಉಡುಪಿ ಜಿಲ್ಲಾಮಟ್ಟದ ತುಳುನಾಡ ಗೊಬ್ಬುಲು ಹಾಗೂ ಆಹಾರಮೇಳ, ತುಳುನಾಡ ಸಂಗೀತ ನೃತ್ಯ ಕಾರ್ಯ ಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಈ ಸಂದರ್ಭ ವಿಶೇಷವಾಗಿ ಮಹಿಳೆಯರು ಮತ್ತು ಪುರುಷರಿಗಾಗಿ ನಡೆದ ತುಳುನಾಡಿನ ಕ್ರೀಡೆಗಳಾದ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಮಾನವ ಗೋಪುರ, ಸೊಪ್ಪಾಟ, ಪಾಲೆದ ಗೊಬ್ಬು, ಚೆನ್ನೆಮಣೆ, ಪೊಕ್ಕು, ತೆಂಗಿನ ಸೋಗೆ ಹೆಣೇಯುವುದು, ತೆಂಗಿನಕಾಯಿ ಸಿಪ್ಪೆತೆಗೆಯುವ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಬನ್ನಂಜೆ ಬಾಬು ಅಮೀನ್ ಹಾಗೂ ತುಳು ಎಂಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿಜಯಲಕ್ಷ್ಮೀ ಪ್ರಸಾದ್ ರೈ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ, ಇಂದ್ರಾಳಿ-ಉಡುಪಿ ಲಯನ್ಸ್ ಮತ್ತು ಲಿಯೋಕ್ಲಬ್ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಭೀಮಾ ಜುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ಸಂದೇಶ್ ಕಾಮತ್, ಆಹಾರ ಮೇಳದ ಸಂಚಾಲಕ ಚಂದ್ರಶೇಖರ್ ರಾವ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸುಧೇಶ್ ಶೆಟ್ಟಿ, ಭುವನಪ್ರಸಾದ್, ತುಳು ಅಕಾಡೆಮಿ ಸದಸ್ಯೆ ತಾರಾ ಆಚಾರ್ಯ, ತುಳುಕೂಟದ ಕೋಶಾಧಿಕಾರಿ ಎಂ.ಜಿ. ಚೈತನ್ಯ, ಯಶೋಧಾ ಕೇಶವ್, ಡಾ.ವಿ.ಕೆ.ಯಾದವ್, ಮೋಹನ್ ಶೆಟ್ಟಿ, ಪ್ರಭಾಕರ್ ಭಂಡಾರಿ, ರತ್ನಾಕರ್ ಇಂದ್ರಾಳಿ, ಮಹಮ್ಮದ್ ಮೌಲಾ,ವೀಣಾ ಶೆಟ್ಟಿ, ವಿವೇಕಾನಂದ ಎನ್, ಪ್ರೇಮ್ ಕುಮಾರ್, ಶಶಿಧರ್ ಕುಂದರ್ ಮಲ್ಪೆ, ಮಂಜು ಕೊಳ ಉಪಸ್ಥಿತರಿದ್ದರು.
ತುಳುನಾಡ ಗೊಬ್ಬುಲು ಕಾರ್ಯಕ್ರಮದ ಸಂಚಾಲಕ ದಿವಾಕರ್ ಸ್ವಾಗತಿಸಿ ದರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್ ವಂದಿಸಿದರು. ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.