ಸಂತೋಷ್ ಕುಮಾರ್ ಕೊಟ್ಟಿಂಜ ನಿಧನ

ಮಂಗಳೂರು : ನಗರದ ಎಸ್.ಕೆ. ಬಿಲ್ಡರ್ ಮಾಲಕ, ಕಟ್ಟಡ ವಿನ್ಯಾಸಕಾರ, ಸಮಾಜ ಸೇವಕ ಸಂತೋಷ್ ಕುಮಾರ್ ಕೊಟ್ಟಿಂಜ (43) ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದಲ್ಲಿ ಕಟ್ಟಡ ವಿನ್ಯಾಸಕಾರರಾಗಿರುವ ಇವರು ಬಂಟ್ವಾಳ ಸಜಿಪ ನಾರಾಯಣಗುರು ಜ್ಞಾನ ಮಂದಿರ, ಸುಂಕದಕಟ್ಟೆ ನಿರಂಜನ ಸ್ವಾಮೀಜಿ ಸಮಾದಿ, ಗೆಜ್ಜೆಗಿರಿ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರದ ಕಟ್ಟಡ ವಿನ್ಯಾಸ, ಮಾರ್ಗದರ್ಶಕರಾಗಿದ್ದರು. ಗುರುಚಾರಿಟೇಬಲ್ ಟ್ರಸ್ಟಿಯಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ರೀತಿ ಯಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸಂತೋಷ್ ಅವರ ಅಂತ್ಯಸಂಸ್ಕಾರ ಮೇ14ರ ಬೆಳಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಕೊಟ್ಟಂಜದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





