ಉಡುಪಿಯ ಕಾರ್ತಿಕ್‌ಗೆ ಚಿನ್ನದ ಪದಕ
ಉಡುಪಿ : ಜಿಲ್ಲಾ ಗೃಹರಕ್ಷಕ ದಳದ ಮಣಿಪಾಲ ಘಟಕದ ಗೃಹರಕ್ಷಕ ಕಾರ್ತಿಕ್ ಇವರು ಮೇ ೨ರಿಂದ ೧೩ರವರೆಗೆ ದಾವಣಗೆರೆಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ಗೃಹರಕ್ಷಕರ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಈ ಸಾಧನೆಗಾಗಿ ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ ಗೃಹರಕ್ಷಕ ದಳದ ಸಂಸ್ಥೆಯ ವತಿಯಿಂದ ಕಾರ್ತಿಕ್‌ರನ್ನು ಅಭಿನಂದಿಸಿದ್ದಾರೆ.
Next Story