ಬೆಂಗಳೂರು | 6.47 ಕೋಟಿ ರೂ. ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು: ಜಿಲ್ಲಾಧಿಕಾರಿ ಜೆ. ಮಂಜುನಾಥ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 13: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎರಡು ಸರಕಾರಿ ಕೆರೆಗಳು, ಎರಡು ನಕಾಶೆ ದಾರಿ, ಗೋಮಾಳ ಸೇರಿದಂತೆ 6.47 ಕೋಟಿ ರೂ. ಮೌಲ್ಯದ 4.28 ಎಕರೆ ಜಮೀನನ್ನು ಶುಕ್ರವಾರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಮಾಡಲಾಯಿತು.
ಕೆಂಗೇರಿ ಹೋಬಳಿಯ ಅಗರ ಗ್ರಾಮದಲ್ಲಿ ರೂ.30 ಲಕ್ಷ ರೂ. ಹಾಗೂ ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದದಲ್ಲಿ ರೂ. 25 ಲಕ್ಷ ರೂ. ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರವುಗೊಳಿಸಲಾಯಿತು.
ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದಲ್ಲಿ ರೂ.75 ಲಕ್ಷ ರೂ. ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದಲ್ಲಿ ರೂ.20 ಲಕ್ಷದ ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರವುಗೊಳಿಸಲಾಯಿತು.
ಯಲಹಂಕ ತಾಲ್ಲೂಕಿನ ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ 2.00 ವಿಸ್ತೀರ್ಣದ ಸರಕಾರಿ ಗೋಮಾಳ ಒತ್ತುವರಿಯಾಗಿದ್ದು, ಅದರ ಅಂದಾಜು ಸುಮಾರು ರೂ. 380 ಲಕ್ಷ ಮೌಲ್ಯದ ಒತ್ತುವರಿ ಮಾಡಿ ತೆರವುಗೊಳಿಸಲಾಯಿತು.
ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ನ್ಯಾನಪನಹಳ್ಳಿ ಗ್ರಾಮದಲ್ಲಿ ಗುಂಡುತೋಪು ಒತ್ತುವರಿಯಾಗಿದ್ದು, ಅದರ ಅಂದಜು ಸುಮಾರು ರೂ. 2.19 ಲಕ್ಷ ಮೌಲ್ಯದ ಒತ್ತುವರಿ ಮಾಡಿ ತೆರವುಗೊಳಿಸಲಾಯಿತು.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ದೊಡ್ಡತಿಮ್ಮಸಂದ್ರ ಗ್ರಾಮದಲ್ಲಿ ರೂ. 100.00 ಲಕ್ಷ ಮೌಲ್ಯದ ಹಾಗೂ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ 0-02 ವಿಸ್ತೀರ್ಣದ ರೂ.15 ಲಕ್ಷ ಮೌಲ್ಯದ ಸರ್ಕಾರಿ ಖರಾಬು ಒತ್ತುವರಿ ಮಾಡಿ ತೆರವುಗೊಳಿಸಲಾಯಿತು.







