Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಧುನಿಕ ರಂಗಭೂಮಿಯ ಮರ್ಮದೊಳಗೆ ಕರಗಿದ...

ಆಧುನಿಕ ರಂಗಭೂಮಿಯ ಮರ್ಮದೊಳಗೆ ಕರಗಿದ ಭೈರಪ್ಪರ ‘ಪರ್ವ’

ಕಲ್ಲಚ್ಚು ಮಹೇಶ ಆರ್ ನಾಯಕ್ಕಲ್ಲಚ್ಚು ಮಹೇಶ ಆರ್ ನಾಯಕ್14 May 2022 11:30 AM IST
share
ಆಧುನಿಕ ರಂಗಭೂಮಿಯ ಮರ್ಮದೊಳಗೆ ಕರಗಿದ ಭೈರಪ್ಪರ ‘ಪರ್ವ’

ಎಸ್.ಎಲ್. ಭೈರಪ್ಪರನ್ನು ಕಳೆದೊಂದು ದಶಕದ ಅವರ ರಾಜಕೀಯ ನಿಲುವಿನ ಹೊರತಾಗಿ ನೋಡಿದರೆ, ಕನ್ನಡದೊಳಗಿನ ಕಾದಂಬರಿ ಕ್ಷೇತ್ರವನ್ನು ತನ್ನ ಬರವಣಿಗೆಯ ಮೂಲಕ ಜಗತ್ತಿಗೆ ತೋರ್ಪಡಿಸಿದ ಒಬ್ಬ ಅಪ್ರತಿಮ ಸಾಧಕ ಎನ್ನಲು ಅವರಿಗೆ ಯಾವ ಸಮ್ಮಾನ ಅಥವಾ ಪೀಠದ ಅಗತ್ಯವಿಲ್ಲ. ಬದಲಾಗಿ ಅವುಗಳ ತಾದ್ಯಾತ್ಮದ ಓದೇ ಸಾಕು. ಒಂದರ್ಥದಲ್ಲಿ ಮೂಲ ಇಂಗ್ಲಿಷರದ್ದು ಎನ್ನಲಾಗುವ ಕಾದಂಬರಿ ರೂಪಕ್ಕೆ ಎಲ್ಲ ಸ್ತರದ ಹೊಸತನವನ್ನು ಹಳೇತನದ ಗಟ್ಟಿ ಚೌಕಟ್ಟಿನಲ್ಲಿ ನೀಡಿ ಸೃಷ್ಟಿಸಿದ ಅಪ್ರತಿಮ ಅವರು. ಇವರ ಒಟ್ಟು 30ರ ಆಸುಪಾಸಿನ ಕಾದಂಬರಿಗಳೆಲ್ಲವೂ ಒಂದು ನೆಲೆಯಲ್ಲಿ ಓದಲು ನಮಗೆ ನಿತ್ಯ ಪರ್ವವಾದರೂ, 40 ವರ್ಷ ಹಿಂದೆ ಬರೆದ ‘ಪರ್ವ’ ಮಾತ್ರ ಮಹಾಭಾರತ ಕಥಾನಕದ ಲೌಕಿಕ ಮನಸ್ಥಿತಿಯನ್ನು ಹೊರಹಾಕುವ ಒಂದು ಮಾಂತ್ರಿಕತೆಯೇ ಸರಿ. ಹೀಗಾಗಿ ಅದರ ಆಧಾರಿತ ರಂಗ ಪ್ರಯೋಗ ಮೈಸೂರು ರಂಗಾಯಣದ ನೆಲೆಯಲ್ಲಿ ಹೊರಬಂದು ಅದೂ ಮಹಾ ರಂಗ ಪ್ರಯೋಗ ಎಂದೇ ತನ್ನನ್ನು ತಾನು ಕರೆಸಿಕೊಂಡು, ಎಂಟು ಗಂಟೆಗಳ ಕಾಲ ಇಡೀ ಮಹಾಭಾರತದ ಬೀಜ ಮತ್ತು ಕ್ಷೇತ್ರದ ಪ್ರಶ್ನೆಗಳನ್ನು ಮತ್ತೆ ಮತ್ತೆ ಹೇಳುತ್ತಾ ಕೇಳುತ್ತಾ, ಹೊಸ ಸಂಚಲನವನ್ನೇ ಉಂಟು ಮಾಡುತ್ತಿದೆ.

ನಮ್ಮಲ್ಲಿ ಕನ್ನಡದ ಕಾದಂಬರಿಗಳು ಯಶಸ್ವಿ ಚಲನಚಿತ್ರವಾಗಿರುವುದಕ್ಕೆ ದೀರ್ಘ ಇತಿಹಾಸವೇ ಇದೆ. ನಾಟಕದ ಮಾತು ಬಂದಾಗ ಮಾತ್ರ ಇದು ಸ್ವಲ್ಪ ಅಪರೂಪವಷ್ಟೆ. ಅದು ಯಾವುದೇ ಇರಲಿ ಪ್ರದರ್ಶನದ ವ್ಯಾಪ್ತಿಗೆ ಕಾದಂಬರಿಯೊಂದು ಬಂದು ನಿಂತಾಗ ಅವುಗಳ ಮೂಲ ಮತ್ತು ತೆರೆಯ ಮೇಲಿನ ಸಾಧ್ಯತೆಗಳ ಇತಿಮಿತಿಯ ಚರ್ಚೆ, ನಿರಂತರ ಮತ್ತು ಅನಿವಾರ್ಯವೂ ಹೌದು. ಹೀಗಾಗಿ ಈ ನಿಟ್ಟಿನಲ್ಲಿಯೇ ಹೊರಬಂದ ಪರ್ವ ನಾಟಕ ಮತ್ತೊಮ್ಮೆ ನಮ್ಮನ್ನು ದ್ವಾಪರ ಯುಗಕ್ಕೆ ಕೊಂಡ್ಯೊಯ್ಯುವ ಪ್ರಯತ್ನ ಮಾಡಿದ್ದಂತೂ ನಿಜ. ಹಾಗೆ ನೋಡಿದರೆ ರಂಗಾಯಣಕ್ಕೆ ಮಹಾಭಾರತದ ಕಥಾನಕವನ್ನೇ ರಂಗಪ್ರಯೋಗ ಮಾಡಬೇಕೆಂದಿದ್ದರೆ ಭೈರಪ್ಪರ ಪರ್ವವೇ ಕಡ್ಡಾಯವೆಂದೇನೋ ಖಂಡಿತ ಇರಲಿಲ್ಲ, ಬದಲಾಗಿ ಮೂಲ ಮಹಾಭಾರತದ ಜತೆಗೆ ಲೋಕದಲ್ಲಿ ರೂಢಿಯಲ್ಲಿರುವ ನೂರಾರು ಮಹಾಭಾರತದ ಎಳೆಗಳನ್ನು ಸಹ ಸಮರ್ಥವಾಗಿ ಬಳಸಬಹುದಾಗಿತ್ತು. ಬಹುಶಃ ಇಲ್ಲಿ ಭೈರಪ್ಪರ ಸಾಹಿತ್ಯದ ಶಕ್ತಿ ಮತ್ತು ಇತ್ತೀಚಿನ ರಾಜಕೀಯ ಯುಕ್ತಿ ಹೆಚ್ಚು ಬಳಕೆಯಾದಂತೆ ಸ್ಪಷ್ಟವಾಗಿ ಕಾಣುತ್ತಿದೆ ಸರಕಾರಿ ಪ್ರಾಯೋಜಿತ ರಂಗಾಯಣಕ್ಕೆ.

ಮಹಾಭಾರತದ ಮೂಲದಲ್ಲೇ ಇರುವ ಮತ್ತು ಪರ್ವ ಕಾದಂಬರಿಯಲ್ಲಿ ಸಹ ಹೆಚ್ಚು ಪ್ರತಿಬಿಂಬಿತವಾಗಿರುವ ಕಾಮ ಹಾಗೂ ಅಧಿಕಾರ ಲಾಲಸೆಯ ಸುತ್ತವೇ ಗಿರಕಿ ಹೊಡೆಯುವ ಈ ಇಡೀ ನಾಟಕ ಆಧುನಿಕ ರಂಗಭೂಮಿಯ ಎಲ್ಲ ತಾಂತ್ರಿಕತೆಯನ್ನು ಸಮರ್ಥವಾಗಿ ಬಳಸಿಕೊಂಡು ಮಹಾಭಾರತದ ಬಹುತೇಕ ಎಲ್ಲ ಘಟನಾವಳಿಗಳನ್ನು ಅತ್ಯಂತ ಆಕರ್ಷಕ ಸಂಕಲಿತ (Edited) ವಿಧಾನದಲ್ಲಿ ನಮ್ಮೆದುರಿಗಿಟ್ಟಿದೆ. ಇಂದು ನಾಟಕಗಳು ಕೇವಲ ನಾಲ್ಕು ಪರದೆಗಳ ನಡುವಿನ ಮಾತುಕತೆಯಾಗಿ ಉಳಿದಿಲ್ಲ ಮತ್ತು ಪ್ರೇಕ್ಷಕರು ಸಹ ಭಾರೀ ಹೊಸತನದ ನಿರೀಕ್ಷೆಯಲ್ಲಿಯೇ ಬಂದವರಿರುತ್ತಾರೆ, ಅದು ಸಹ ರಂಗಾಯಣದಂತಹ ಸರಕಾರಿ ಕೃಪಾಪೋಷಿತ ಸಂಸ್ಥೆಯ ಹಿನ್ನೆಲೆಯ ಇಂತಹ ನಾಟಕಗಳಿಗೆ. ಹೆಚ್ಚು ಕಡಿಮೆ ಈ ನಿರೀಕ್ಷೆಗೆ ಚ್ಯುತಿ ಬರದಂತಿದ್ದ ಮಂಗಳೂರಿನ ಪ್ರದರ್ಶನ ನಡೆದದ್ದು ಒಳಾಂಗಣದಲ್ಲ್ಲಾದ ಕಾರಣ ಒಂದು ರೀತಿಯ ನಿರಾಸೆ ಮೂಡಿದ್ದು ಸಹಜ. (40ರಷ್ಟು ಕಲಾವಿದರ ವಿವಿಧ ಪ್ರಕಾರದ ಸಂಯೋಜನೆ ಇರುವ ಇದಕ್ಕೆ ಹೊರಾಂಗಣ ಹೆಚ್ಚು ಸೂಕ್ತ) ಬಹುತೇಕ ವೃತ್ತಿಪರ ಎನ್ನಬಹುದಾದ ಕಲಾವಿದರೇ ಇರುವ ಈ ರಂಗಾಯಣದ ವ್ಯವಸ್ಥೆಯೊಳಗೆ ಅದರ ಪರಿಣಾಮ ನಟನೆಯಲ್ಲಿ ಕಾಣಬೇಕಾದ್ದು ತುಂಬಾ ಅಗತ್ಯ ಮತ್ತು ಕೆಲವು ಸಂದರ್ಭ ಹೊರತು ಪಡಿಸಿ ಇದು ಸಾಕಾರವೂ ಆಗಿದೆ ನಿಜ.

ನಾಟಕದ ಇತರೆಲ್ಲ ಅಗತ್ಯದ ನಿರ್ವಹಣೆಗೆ ಸಹ ಭಾರೀ ಹೆಸರು ಮಾಡಿರುವ ವ್ಯಕ್ತಿಗಳ ತಂಡವೇ ಇದರ ಹಿಂದೆ ಇರುವಾಗ ಅವುಗಳ ಸಮ್ಮಿಶ್ರ ಫಲಿತಾಂಶ ಈ ಮಹಾ ರಂಗ ಪ್ರಯೋಗದ ಒಟ್ಟಾರೆ ಯಶಸ್ಸಿನ ಭಾಗವಾಗಿ ಕಂಡಿತು, ಕಾದಂಬರಿ ಪರ್ವದ ಮತ್ತೊಂದು ಮಜಲನ್ನು ನಮ್ಮೆದುರಿಗಿಡುತ್ತ. ಎಂಟು ಗಂಟೆಗಳ ಸತತ ಪ್ರಯೋಗದಲ್ಲಿ ನಿರಂತರವಾಗಿ ಪ್ರೇಕ್ಷಕರನ್ನು ತನ್ನೊಳಗೆ ಹಿಡಿದಿರುವುದು ಎಂತಹ ಘಟಾನುಘಟಿಗಳಿಗೂ ಸವಾಲೇ ಸರಿ. ಈ ನಿಟ್ಟಿನಲ್ಲಿ ಕೆಲವು ಬಾರಿ ರಂಗಕ್ಕೆ ಬಂದ ದೀರ್ಘ ಮತ್ತು ಕಣ್ಣು ಕೂರಿಸುವ ಒಂದೆರಡು ದೃಶ್ಯಾವಳಿಗಳು ಇದರಲ್ಲಿ ನುಸುಳಿದ್ದು ಸಹ ಇದ್ದೇ ಇದೆ. ಜತೆಗೆ ಕೆಲವು ತೀರಾ ಆಧುನಿಕತೆಯ ಲೌಕಿಕ ರೂಪದ ಕಳಪೆ ಮನರಂಜನೆಯ ವಿಧಾನವೂ ಹಾಸುಹೊಕ್ಕಾಗಿ ಬಂದು ಹೋದದ್ದು ಸಂಗೀತವೂ ಸೇರಿದಂತೆ ಅಭಿನಯದ ಹಾವಭಾವ ಮಾತುಕತೆಯೊಳಗೆ ಇಲ್ಲಿ ಖಂಡಿತ ಬೇಕಾಗಿರಲಿಲ್ಲ. (ಉಳಿದಂತೆ ಹತ್ತಾರು ಉಪಕರಣ ಉಪಯೋಗಿಸಿದ ಲೈವ್ ಮ್ಯೂಸಿಕ್ ತುಂಬಾ ಆಕರ್ಷಕ) ಹಿನ್ನೆಲೆಯ ಹಾಡುಗಳನ್ನು ಕನ್ನಡ ಮೂಲದ್ದೇ ಮಾಡಬಹುದಿತ್ತೇನೋ? ಹೀಗೆ ಕೆಲವು ಬೇಕು ಬೇಡಗಳು ಇನ್ನೂ ಇರುವ ಇಂತಹ ಒಂದು ಸಾಹಸ ಕನ್ನಡದ ವ್ಯಾಪ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸುವಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ ಎಂಬುದು ನಿಸ್ಸಂಶಯ.

share
ಕಲ್ಲಚ್ಚು ಮಹೇಶ ಆರ್ ನಾಯಕ್
ಕಲ್ಲಚ್ಚು ಮಹೇಶ ಆರ್ ನಾಯಕ್
Next Story
X