ಐಪಿಎಲ್ ನಿಂದ ನಿವೃತ್ತಿ ಘೋಷಿಸಿ, ನಂತರ ಟ್ವೀಟ್ ಅಳಿಸಿದ ಅಂಬಟಿ ರಾಯುಡು

Photo:PTI
ಹೊಸದಿಲ್ಲಿ:ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಟಿ ರಾಯುಡು ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (ಐಪಿಎಲ್) ನಿವೃತ್ತಿ ಘೋಷಿಸಿದ್ದಾರೆ. ಆದರೆ ನಂತರ ಅವರು ತನ್ನ ಟ್ವೀಟ್ ಅನ್ನು ಅಳಿಸಿದ್ದಾರೆ.
"ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ನಾನು 13 ವರ್ಷಗಳಿಂದ 2 ಶ್ರೇಷ್ಠ ತಂಡಗಳ ಭಾಗವಾಗಿದ್ದುಕೊಂಡು ಅದ್ಭುತ ಸಮಯವನ್ನು ಕಳೆದಿದ್ದೇನೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ರಾಯುಡು ಟ್ವೀಟ್ ಮಾಡಿದ್ದಾರೆ.
ರಾಯುಡು ಐಪಿಎಲ್ನಲ್ಲಿ ಈ ತನಕ 187 ಪಂದ್ಯಗಳನ್ನು ಆಡಿದ್ದಾರೆ. 29.28 ಸರಾಸರಿಯಲ್ಲಿ 4,187 ರನ್ ಗಳಿಸಿದ್ದಾರೆ. ಅವರು 127.26 ರ ಉತ್ತಮ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ, ಪಂದ್ಯಾವಳಿಯಲ್ಲಿ ಅವರ ಅತ್ಯಧಿಕ ಸ್ಕೋರ್ ಔಟಾಗದೆ 100 .
2010ರಲ್ಲಿ ರಾಯುಡು ಐಪಿಎಲ್ ವೃತ್ತಿಜೀವನ ಆರಂಭವಾಯಿತು. 2010 ರಿಂದ 2017 ರವರೆಗೆ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದ್ದರು.
2018ರ ಐಪಿಎಲ್ಗೂ ಮುನ್ನ ರಾಯುಡು ಅವರನ್ನು ಸಿಎಸ್ಕೆ ಖರೀದಿಸಿತ್ತು