ಕಾಪುವಿನಲ್ಲಿ ಸ್ವದೇಶಿ ಮೇಳ-2022

ಕಾಪು : ವಿದೇಶಿ ವಸ್ತುಗಳ ಬಳಕೆಗೆ ಅವಲಂಬಿತರಾಗದೆ ಸ್ವದೇಶಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವು ದರಿಂದ ಪ್ರತಿಯೋರ್ವರು ಸ್ವಾವಲಂಬಿಗಳಾಗಲಿ ಸಹಕಾರಿಯಾಗುತ್ತದೆ. ಇದರೊಂದಿಗೆ ದೇಶವೂ ಆರ್ಥಿಕವಾಗಿ ಸದೃಢವಾಗುತ್ತದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಪಡುಕುತ್ಯಾರು ಅಭಿಪ್ರಾಯಪಟ್ಟರು.
ಶನಿವಾರ ವಿಶ್ವ ಭಾರತಿ ಕಾಪು ಇದರ ಆಶ್ರಯದಲ್ಲಿ ಕಾಪುವಿನ ಶ್ರೀ ಕಾಳಿಕಾಂಬಾ ದೇವಸ್ಥಾನ ವಠಾರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸ್ವದೇಶಿ ಮೇಳ-2022ಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಗ್ರಾಮೀಣ ಪ್ರದೇಶಗಳಲ್ಲೂ ಸ್ವದೇಶಿ ವಸ್ತುಗಳ ಬಳಕೆ ಮತ್ತು ಉತ್ಪನ್ನಗಳನ್ನು ಹೆಚ್ಚಾಗಿ ಮಾಡುವ ಮೂಲಕ ವಿದೇಶಗಳಿಗೆ ದೇಶೀಯ ಉಪ್ತನ್ನಗಳನ್ನು ರಪ್ತು ಮಾಡಬೇಕು. ಇದರಿಂದ ಗಾಂಧೀಜಿಯವರ ರಾಮರಾಜ್ಯ ಕನಸು ನನಸಾಗುತ್ತದೆ. ಇದಕ್ಕೆ ಪ್ರತಿಯೋರ್ವ ನಾಗರೀಕನು ಚಿಂತನೆ ನಡೆಸಬೇಕು ಎಂದು ಅವರು ಕರೆ ನೀಡಿದರು.
ಅಭಿನಂದನೆ: ಅಂತರಾಷ್ಟ್ರಯ ಚತ್ರೋತ್ಸವ ಬಾಲನಟ ಪ್ರಶಸ್ತಿ ವಿಜೇತ ದೃಶಾ ಕೊಡಗು, ಮುಳುಗು ತಜ್ಞ ಈಶ್ವರ ಕಟೀಲು, ಚಿತ್ರಕಲಾವಿದೆ ರಕ್ಷಾ ಆರ್. ಪೂಜಾರಿ ಇವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ವಿಶ್ವಭಾರತಿ ಕಾಪು ಅಧ್ಯಕ್ಷ ಶ್ರೀಕಾಂತ ಬಿ. ಆಚಾರ್ಙ ವಹಿಸಿದ್ದರು. ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಉದ್ಯಮಿ ರಾಕೇಶ್ ಅಜಿಲಾ ಕೆ. ಆರ್, ಕಾಪು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ್ ಆಚಾರ್ಯ, ಸ್ವದೇಶಿ ಮೇಳ ಸಂಚಾಲಕ ಎಲ್ಲೂರು ಆನಂದ ಕುಂದರ್ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವದೇಶಿ ವಸ್ತುಪ್ರದಶರ್ನ, ವಿವಿಧ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಗಳು, ವಿವಿಧ ಕಲಾ ಪ್ರದರ್ಶನ, ಎಲ್ಲ ವಯೋಮಾನದವರಿಗೂ ವಿವಿಧ ಸ್ಪರ್ಧೆಗಳು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಪುನೀತ ನಮನ ಗಾಯನ ಕಾರ್ಯಕ್ರಮ, ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ ಕಾರ್ಯಕ್ರಮ ಮೇ 16ರವರೆಗೆ ನಡೆಯಲಿದೆ ಎಂದು ಸಂಘಟಕ ಬಾಸುಮ ಕೊಡಗು ತಿಳಿಸಿದರು.







