ದ್ವಿತೀಯ ಪಿಯು ಪರೀಕ್ಷೆ; ದ.ಕ.ಜಿಲ್ಲೆಯಲ್ಲಿ 276 ವಿದ್ಯಾರ್ಥಿಗಳು ಗೈರು
ಮಂಗಳೂರು : ದ.ಕ.ಜಿಲ್ಲೆಯ 51 ಕೇಂದ್ರಗಳಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳಲ್ಲಿ ಒಟ್ಟು 276 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಸಮಾಜಶಾಸ್ತ್ರ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ ೩,೭೬೦ ವಿದ್ಯಾರ್ಥಿಗಳ ಪೈಕಿ ೩,೫೪೬ ಮಂದಿ ಹಾಜರಾಗಿದ್ದು, ೨೧೪ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಲೆಕ್ಟ್ರಾನಿಕ್ಸ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿ ಸಿದ್ದ ೩೦೨ ವಿದ್ಯಾರ್ಥಿಗಳ ಪೈಕಿ ೩೦೦ ಮಂದಿ ಹಾಜರಾಗಿದ್ದರೆ, ಇಬ್ಬರು ಗೈರಾಗಿದ್ದಾರೆ. ಗಣಕ ವಿಜ್ಞಾನ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ ೬,೬೨೫ ವಿದ್ಯಾರ್ಥಿಗಳ ಪೈಕಿ ೬,೫೬೫ ಮಂದಿ ಹಾಜರಾಗಿದ್ದು, ೬೦ ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಡಿಡಿಪಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





