ಮದ್ರಸ ಪರೀಕ್ಷೆ; ಹಯಾ ಖತೀಜಾ ಪ್ರಥಮ ರ‍್ಯಾಂಕ್
ಮಂಗಳೂರು : ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ಕೆಎಸ್‌ಎ ಶಿಕ್ಷಣ ಮಂಡಳಿಯು ಎಪ್ರಿಲ್‌ನಲ್ಲಿ ನಡೆಸಿದ ಐದನೆ ತರಗತಿಯ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ಮುಕ್ಕಚೇರಿಯ ಅಲ್ ಮನಾರ್ ಮದ್ರಸದ ವಿದ್ಯಾರ್ಥಿನಿ ಹಯಾ ಖತೀಜಾ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಈ ಮದ್ರಸದ ನೈಮಾ ಝೈನಬ್ ದ್ವಿತೀಯ ಮತ್ತು ದೇರಳಕಟ್ಟೆಯ ಅಲ್ ಹಿಕ್ಮಾ ಮದ್ರಸದ ಲಿಯಾ ಹಾಗೂ ಮುಕ್ಕಚೇರಿಯ ಅಲ್ ಮನಾರ್ ಮದ್ರಸದ ನಬೀಹಾ ಮರ್ಯಮ್ ಅಮಾನ್ ತೃತೀಯ ರ‍್ಯಾಂಕ್ ಪಡೆದಿದ್ದಾರೆ ಎಂದು ಕೆಎಸ್‌ಎಇಬಿ ಕಾರ್ಯದರ್ಶಿ ಹಸೈನಾರ್ ಸ್ವಲಾಹಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story