ರೆಡ್ ಕ್ರಾಸ್ ಚುನಾವಣೆ : ನಾಮಪತ್ರ ಸಲ್ಲಿಕೆ

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ೨೦೨೨-೨೫ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರ ಸ್ಥಾನಕ್ಕೆ ಮೇ ೨೯ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಮಾಜಿಕ ಕಾರ್ಯಕರ್ತ ಎಚ್. ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ಶನಿವಾರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಚುನಾವಣಾ ಅಧಿಕಾರಿಯಾಗಿರುವ ಬಿ.ರಾಮಚಂದ್ರ ಮತ್ತು ಭಾರತೀಯ ರೆಡ್‌ಕ್ರಾಸ್‌ನ ದ.ಕ.ಜಿಲ್ಲಾ ಗೌರವ ಕಾರ್ಯದರ್ಶಿ ಕುಸುಮಾಧರ ಬಿ.ಕೆ. ನಾಮಪತ್ರ ಸ್ವೀಕರಿಸಿದರು.
ಈ ಸಂದರ್ಭ ಆರ್ ಕೆ ಮದನಿ ಅಮ್ಮೆಂಬಳ, ಸಿದ್ದೀಕ್ ಉಳ್ಳಾಲ, ಬಶೀರ್ ಬೆಂಗ್ರೆ, ಹಮೀದ್ ಬೆಂಗ್ರೆ, ಲತೀಫ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.
Next Story