ಕ್ಷೀರಪಥದ ಕೇಂದ್ರದಲ್ಲಿ ಬೃಹತ್ ಕಪ್ಪುಕುಳಿಯ ಫೋಟೊ ಸೆರೆಹಿಡಿದ ಸಂಶೋಧಕರು
PHOTO:TWITTER/
@ESO
ಲಂಡನ್, ಮೇ 14: ಕಪ್ಪುಕುಳಿಗಳು ಐನ್ಸ್ಟೀನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಅತ್ಯಂತ ಆಳವಾದ ಸಿದ್ಧಾಂತಗಳಾಗಿವೆ. ಆರಂಭದಲ್ಲಿ ಕಪ್ಪುಕುಳಿಗಳ ಬಗ್ಗೆ ಭೌತಿಕವಾಗಿ ಸಂಬಂಧಿಸಿದ ವಿಷಯಗಳ ಬದಲು ಸಿದ್ಧಾಂತದ ಗಣಿತದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದರೂ, ಬಳಿಕ ಇವು ನಕ್ಷತ್ರ ಪುಂಜವನ್ನು ರೂಪಿಸುವ ಗುರುತ್ವಾಕರ್ಷಣೆಯ ಕುಸಿತದ ಸಾಮಾನ್ಯ, ಮತ್ತು ಕೆಲವೊಮ್ಮೆ ಅನಿವಾರ್ಯ ಫಲಿತಾಂಶಗಳೆಂದು ನಿರ್ಣಯಿಸಲಾಗಿದೆ.
ವಾಸ್ತವವಾಗಿ, ಬಹುತೇಕ ಭೌತಶಾಸ್ತ್ರಜ್ಞರು ನಮ್ಮ ನಕ್ಷತ್ರಪುಂಜವು ಅದರ ಕೇಂದ್ರದಲ್ಲಿ ಒಂದು ಬೃಹತ್ ಕುಳಿಯ ಸುತ್ತ ಸುತ್ತುತ್ತಿದೆ ಎಂದು ಶಂಕಿಸಿದ್ದಾರೆ. ಆದರೆ ಈಗ, ಕೇಂದ್ರ ಲಂಕಾಶೈರ್ ವಿವಿಯ ತಂಡ ಸೇರಿದಂತೆ ಅಂತರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವು ಕ್ಷೀರಪಥದ ಮಧ್ಯಭಾಗದಲ್ಲಿ ಸುಪ್ತವಾಗಿರುವ ವಸ್ತುವಿನ ಮೊದಲ ಚಿತ್ರವನ್ನು ಅನಾವರಣಗೊಳಿಸಿದ್ದು ಇದು ಸ್ಯಾಗಿಟಾರಿಯಸ್ ಎ* ಎಂದು ಕರೆಸಿಕೊಳ್ಳುವ , ನಿಷ್ಕ್ರಿಯವಾಗಿರುವಂತೆ ತೋರುವ ಬೃಹತ್ ಕಪ್ಪುಕುಳಿಯಾಗಿದೆ. ಇದರೊಂದಿಗೆ ಕಪ್ಪುಕುಳಿಗೆ ಈಗ ಸಶಕ್ತ ಪುರಾವೆಯಿದೆ. ಕಪ್ಪುಕುಳಿ ಭೂಮಿಗೆ ಹತ್ತಿರವಿರುವಂತೆ ಭಾಸವಾದರೂ, ವಾಸ್ತವವಾಗಿ ಅದು ಭೂಮಿಯಿಂದ ಸುಮಾರು 26,000 ಬೆಳಕಿನ ವರ್ಷದಷ್ಟು ದೂರವಿದೆ. ಭೂಮಿಯಿಂದ ತುಂಬಾ ದೂರವಿರುವುದರಿಂದ ಚಂದ್ರನ ಮೇಲಿನ ಡೋನಟ್ನಂತೆ ಆಕಾಶದಲ್ಲಿ ಅದೇ ಗಾತ್ರದಲ್ಲಿ ನಮಗೆ ಕಾಣಿಸುತ್ತದೆ.
ಸಂಶೋಧಕರ ತಂಡವು ಗ್ಲೋಬಲ್ ಇವೆಂಟ್ ಹೊರಿಝಾನ್ ಟೆಲಿಸ್ಕೋಪ್ನ ಸಹಯೋಗದ ಭಾಗವಾಗಿತ್ತು. ಇದು ಸಾಮೂಹಿಕವಾಗಿ ನಮ್ಮ ಭೂಮಿಯ ಗಾತ್ರದಷ್ಟು ದೊಡ್ಡ ದೂರದರ್ಶಕವಾಗಿ ರೂಪುಗೊಂಡಿರುವ ಎಂಟು ದೂರದರ್ಶಕಗಳ ವಿಶ್ವದಾದ್ಯಂತ ನೆಟ್ವರ್ಕ್ನಿಂದ ಅವಲೋಕನಗಳನ್ನು ಬಳಸಿದ್ದು ಅದ್ಭುತ ಫೋಟೋ ಸೆರೆಹಿಡಿದಿದೆ ಎಂದು ಸಂಶೋಧಕರ ತಂಡ ಹೇಳಿದೆ.