ದಿಲ್ಲಿ:ಡೇರಿ ಫಾರ್ಮ್‌ನಲ್ಲಿ ಬೆಂಕಿ 20 ಆಕಳುಗಳ ಸಜೀವ ದಹನ

ಹೊಸದಿಲ್ಲಿ,ಮೇ 14: ದಿಲ್ಲಿಯ ರೋಹಿಣಿಯ ಸಾವ್ಡಾ ಗ್ರಾಮದಲ್ಲಿಯ ಡೇರಿ ಫಾರ್ಮ್‌ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 20 ಆಕಳುಗಳು ಸಜೀವ ದಹನಗೊಂಡಿವೆ.
ಮಾಹಿತಿ ಲಭಿಸಿದ ಬಳಿಕ ಅಪರಾಹ್ನ 1:25ರ ಸುಮಾರಿಗೆ ತನ್ನ ಸಿಬ್ಬಂದಿಗಳು ಸ್ಥಳವನ್ನು ತಲುಪಿದ್ದು,ಏಳು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ದಳವು ತಿಳಿಸಿದೆ.
ಬೆಂಕಿ ಅವಘಡಕ್ಕೆ ಕಾರಣವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಕಳೆದ ತಿಂಗಳು ಘಾಝಿಯಾಬಾದ್‌ನ ಇಂದಿರಾಪುರಮ್‌ನಲ್ಲಿಯ ಗ್ರಾಮವೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 38 ಆಕಳುಗಳು ಮೃತಪಟ್ಟಿದ್ದವು.
Next Story