ಬಹುಕೋಟಿ ಹಗರಣ ವಧಾವನ ಸಹೋದರರಿಗೆ ಜಾಮೀನು
ಹೊಸದಿಲ್ಲಿ, ಮೇ 14: ಬಹು ಕೋಟಿ ರೂಪಾಯಿ ಹಗರಣದ ಪ್ರಕರಣದಲ್ಲಿ ದೀವಾನ್ ಹೌಸಿಂಗ್ ಫಿನಾನ್ಸ್ ಕಾರ್ಪೋರೇಶನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್)ನ ಮಾಜಿ ಪ್ರವರ್ತಕರಾದ ಧೀರಜ್ ರಾಜೇಶ್ ವಧಾವನ ಹಾಗೂ ಕಪಿಲ್ ರಾಜೇಶ್ ವಧಾವನ ಅವರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ. ಶುಕ್ರವಾರ ಜಾಮೀನು ಮಂಜೂರು ಮಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರೀತೇಶ್ ಸಿಂಗ್, ‘‘ಪ್ರಸಕ್ತ ಪ್ರಕರಣದಲ್ಲಿ ಆರೋಪಿಗಳಾದ ಕಪಿಲ್ ರಾಜೇಶ್ ವಧಾವನ ಹಾಗೂ ಧೀರಜ್ ರಾಜೇಶ್ ವಧಾವನ ಅವರನ್ನು ತನಿಖೆಯ ಸಂದರ್ಭ ಬಂಧಿಸಿಲ್ಲ’’ ಎಂದರು. ಅವರನ್ನು ಬಂಧಿಸದೆ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು. ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ, ಕಸ್ಟಡಿಯ ಅಗತ್ಯ ಇಲ್ಲ ಎಂದು ಹೇಳಿದರು. ಧೀರಜ್ ವಧಾವನ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ವಿಜಯ್ ಅಗರ್ವಾಲ್ ಹಾಗೂ ಕಪಿಲ್ ವಧಾವನ ಅವರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ರೆಬೆಕ್ಕಾ ಜಾನ್ ಅವರು ಜಾಮೀನು ಅರ್ಜಿಗಳ ಬಗ್ಗೆ ವಾದಿಸಿದರು.
Next Story





