ಅತ್ಯಾಚಾರ ಪ್ರಕರಣ: ರಾಜಸ್ಥಾನ ಸಚಿವರ ಪುತ್ರನನ್ನು ಬಂಧಿಸಲು ಜೈಪುರಕ್ಕೆ ಆಗಮಿಸಿದ ದಿಲ್ಲಿ ಪೊಲೀಸರು

ಸಾಂದರ್ಭಿಕ ಚಿತ್ರ, Photo: PTI
ಜೈಪುರ: 23 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ರಾಜಸ್ಥಾನ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ನನ್ನು ಬಂಧಿಸಲು ದಿಲ್ಲಿ ಪೊಲೀಸರ 15 ಅಧಿಕಾರಿಗಳ ತಂಡ ರವಿವಾರ ಬೆಳಗ್ಗೆ ಜೈಪುರಕ್ಕೆ ಆಗಮಿಸಿದೆ.
ನಗರದಲ್ಲಿರುವ ಸಚಿವರ ಎರಡು ನಿವಾಸಗಳಿಗೆ ಪೊಲೀಸ್ ತಂಡ ಭೇಟಿ ನೀಡಿದ್ದು, ಆರೋಪಿ ಅಲ್ಲಿ ರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿ 8 ರಿಂದ ಈ ವರ್ಷದ ಎಪ್ರಿಲ್ 17 ರ ನಡುವೆ ಸಚಿವರ ಮಗ ತನ್ನ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ವರ್ಷ ಫೇಸ್ಬುಕ್ನಲ್ಲಿ ರೋಹಿತ್ ಜೋಶಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ ಹಾಗೂ ಅಂದಿನಿಂದ ಆತ ಸಂಪರ್ಕದಲ್ಲಿದ್ದ. ರೋಹಿತ್ ಜೋಶಿ ಅಪಹರಣ ಹಾಗೂ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
Next Story





