Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಂವಿಧಾನ, ಸಾಂವಿಧಾನಿಕ ವ್ಯವಸ್ಥೆ...

ಸಂವಿಧಾನ, ಸಾಂವಿಧಾನಿಕ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ವಾರ್ತಾಭಾರತಿವಾರ್ತಾಭಾರತಿ15 May 2022 10:47 PM IST
share
ಸಂವಿಧಾನ, ಸಾಂವಿಧಾನಿಕ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ದಾವಣಗೆರೆ: ಪ್ರಗತಿಪರ ಚಿಂತನೆ ಮಾಡುವ ನಾವೆಲ್ಲರೂ ಒಟ್ಟಾಗಿ ಸೇರಿ ಸಂವಿಧಾನ  ಮತ್ತು ಸಂವಿಧಾನವನ್ನು ರಕ್ಷಿಸುವ ಆಲೋಚನೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ನಾವು ಸಂವಿಧಾನ, ಸಂವಿಧಾನಿಕ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ ಎಂದು ವಿಧಾನಸಭೆ ಮಾಜಿ ಸಭಾಪತಿ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಇಮ್ತಿಯಾಜ್ ಹುಸೇನ್ ಅವರ ಕಪ್ಪು ನೆಲದ ಕೆಂಪು ಗಾದೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಡಿವಂತಿಕೆಯ ಗೂಡು ಕಟ್ಟಿಕೊಂಡಿರುವ ನಾವುಗಳು ಅಂದರೆ ಪ್ರಗತಿಪರರು ವಿಭಜನೆ ಆಗುತ್ತಾ ಹೋಗುತ್ತಿದ್ದೇವೆ. ಇದರಿಂದಾಗಿ ಹೋರಾಟಗಳು ಹಿನ್ನಡೆ ಕಾಣುತ್ತಿವೆ ಎಂದು ಹೇಳಿದರು.

ಜನಪರ ಕಾಳಜಿ ಇರುವ ನಾವು ಜನರ ಪರ ಹೋರಾಟ ಮಾಡಬೇಕಾದ ನಾವುಗಳೇ ಅಧಿಕಾರ ಸಿಕ್ಕಾಗ ಜನರ ಪರವಾಗಿ ಮಾತನಾಡದೇ ನಮ್ಮ ಸ್ವಾರ್ಥಕ್ಕೆ ಅಧಿಕಾರವನ್ನು ಬಳಸಿ ಬಳಸಿಕೊಳ್ಳುತ್ತೇವೆ ಇದರಿಂದಾಗಿ ಕೆಳವರ್ಗದ ಜನತೆ ಅಲ್ಲಿ ಇದ್ದಾರೆ ಅವರಿಗೆ ಮೂಲಭೂತವಾಗಿ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಎಲ್ಲಿಯವರೆಗೂ ವರ್ಣಭೇದ ನೀತಿ ಹೋಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ತನ್ನ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.

ಹೋರಾಟ ಮಾಡುವವರಿಗೆ ಟೀಕೆ ಟಿಪ್ಪಣಿಗಳು ಸಹಜ ಆದರೆ ಟೀಕೆ ಮಾಡುವುದು ಸುಲಭ. ಇದನ್ನು ಚಳುವಳಿಗಾರರು ತಾಳ್ಮೆಯಿಂದ ತೆಗೆದುಕೊಳ್ಳಬೇಕಾಗಿದೆ. ಆದರೆ ಇಂದು ನಮಗೆ ನಾವುಗಳು ಚಳವಳಿಗಳನ್ನು ಹತ್ತಿಕ್ಕುವ ಮಟ್ಟಕ್ಕೆ ಬಂದಿದ್ದೇವೆ. ಇಲ್ಲಿಗೆ ಬಂದಿದ್ದೇವೆಂದು ಅಂದ್ರೆ ದ್ವೇಷವನ್ನು ಎಲ್ಲದರಲ್ಲೂ ಕಾಣುತ್ತಿದ್ದೇವೆ ಎಂದರ್ಥ ಎಂದು ಹೇಳಿದರು.

ಜಾತಿ ರಹಿತವಾಗಿ ಹೋರಾಟ ಮಾಡುತ್ತಿದ್ದ ಅಂದಿನ ಹೋರಾಟಗಳು ಇದೀಗ ಛಿದ್ರಛಿದ್ರಗೊಂಡಿವೆ. ಇಂದು ಜಾತಿಯೇ ಮೇಲೆ ಮೇಲುಗೈ ಸಾಧಿಸಿದೆ. ಅದಲ್ಲದೆ ಉಪ ಜಾತಿಗಳ ಆಧಾರದ ಮೇಲೆ ಹೋರಾಟಗಳು ನಡೆಯುತ್ತಿವೆ. ಅವುಗಳೇ ಪ್ರಾತಿನಿಧ್ಯ ಪಡೆಯುವ ಮಟ್ಟಕ್ಕೆ ತಲುಪುತ್ತಿದ್ದು ಇದರಿಂದಾಗಿ ನಿಜವಾದ ಹೋರಾಟಗಳಿಗೆ ಫಲ ಸಿಗುತ್ತಿಲ್ಲ ಎಂದರು.

ದಾವಣಗೆರೆಯಲ್ಲಿ ಒಂದು ಕಾಲಕ್ಕೆ ಪ್ರಬಲವಾಗಿದ್ದ ಕಮ್ಯುನಿಸ್ಟ್ ಚಳವಳಿ ಹಿನ್ನಡೆಗೆ ಬದಲು ಕೇವಲ ಮುಖಂಡರು ಕಷ್ಟಸಾಧ್ಯವಲ್ಲ ವಿಶ್ವವ್ಯಾಪಿ ನಡೆದ ಕೆಲವು ನೀತಿಯ ಹೋರಾಟಗಳೇ ಇದಕ್ಕೆ ಕಾರಣ. ಅಂದಮಾತ್ರಕ್ಕೆ ಕಮ್ಯುನಿಸ್ಟ್ ಪಕ್ಷ ಯಾರ ಆಸ್ತಿಯೂ ಅಲ್ಲ. ಪ್ರಗತಿಪರ ಚಿಂತನೆ ಯಾರದ್ದು ಅಲ್ಲ. ಅದು ಹೋರಾಟಗಾರರ ಆಸ್ತಿ ನಿರಂತರವಾಗಿ ಹೋರಾಟ ಮಾಡುವವರು ನಿಜವಾದ ಕಮ್ಯುನಿಸ್ಟರು. ಯಾರೇ ಆಗಲಿ ಜಾತಿ ರಹಿತವಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಇರುವವರೆಲ್ಲಾ ಕೋಮವಾದಿಗಳಲ್ಲ. ಮನುಷ್ಯ ಮೂಲತ: ಅವಕಾಶವಾದಿ, ಅದು ಮನುಷ್ಯನ ದೌರ್ಬಲ್ಯ. ಎಲ್ಲಿ ಸೌಲಭ್ಯ ಸಿಗುತ್ತದೋ ಅಲ್ಲಿ ಹೋಗುತ್ತಾನೆ. ಮತ್ತೆ ಕಡೆ ಗಾಳಿ ಬೀಸಿದರೆ ಅಲ್ಲಿ ಹೋಗುತ್ತಾರೆ. ಯಾರಿಗೇ ನಾನೇ ಹೇಳುವುದನ್ನು ಕೇಳಬೇಕೆನ್ನುವ ಮನೋಭಾವ ಇರುತ್ತದೆಯೋ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಲ್ಲ ಎಂದರು.

ಎಲ್‍ಐಸಿ, ಹೆಚ್‍ಎಎಲ್, ಐಟಿಐ ಸೇರಿದಂತೆ ಯಾವುದೇ ಸಾರ್ವಜನಿಕ ಸಂಸ್ಥೆಗಳು ಈಗ ಸರ್ಕಾರಿ ಸಂಸ್ಥೆಗಳಾಗಿ ಉಳಿದಿಲ್ಲ. ಅಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬೆಲೆಏರಿಕೆ, ನಿಷ್ಕ್ರಿಯತೆ, ನಿರುದ್ಯೋಗದ ವಿರುದ್ದ ಮಾತನಾಡಿದ ನರೇಂದ್ರ ಮೋದಿ ಇಂದು ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇವಲ ದೇವಸ್ಥಾನ ಕಟ್ಟುವ ಕೆಲಸ ಸರ್ಕಾರದಲ್ಲ. ದೇಶ ಕಟ್ಟುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃತಿಕಾರ ಇಂತಿಯಾಜ್ ಹುಸೇನ್, ನಿವೃತ್ತ ಸಹ ಪ್ರಾಧ್ಯಾಪಕ ದಾದಾಪೀರ್ ನವಿಲೆಹಾಳ್, ನಿವೃತ್ತ ಮುಖ್ಯೋಪಾಧ್ಯಯ ಕೆ.ಇಮಾಂ, ಎಐಟಿಯುಸಿ ರಾಜಾಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್, ಪತ್ರಕರ್ತ ಬಿ.ಎನ್.ಮಲ್ಲೇಶ್, ದೊಣ್ಣೆಹಳ್ಳಿ ಗುರುಮೂರ್ತಿ, ಅಯಾಜ್ ಹುಸೇನ್, ಪೀರ್‍ಬಾಷಾ, ಜೆ.ಕಲೀಂಬಾಷ ಇತರರು ಇದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X