ಭಟ್ಕಳ: ಮೇ18 ರಂದು ಫ್ಯಾಮಿಲಿ ಗೆಟ್ ಟುಗೆದರ್, ಸೌಹಾರ್ದ ಕಾರ್ಯಕ್ರಮ
ಭಟ್ಕಳ: ಇಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಅನ್ಫಾಲ್ ಹೈಪರ್ ಮಾರ್ಕೆಟ್ ಪಕ್ಕದಲ್ಲಿರುವ ಆಮೀನಾ ಪ್ಯಾಲೇಸ್ ನಲ್ಲಿ ಮೇ18ರಂದು ಸಂಜೆ 5ಗಂಟೆಗೆ ಈದ್ ಸೌಹಾರ್ದ ಕೂಟ, ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಹಾಗೂ ಈದ್ ಸೌಹಾರ್ದ ಕೂಟ ಕಾರ್ಯಕ್ರಮದ ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ಹಿಂದೂ, ಮುಸ್ಲಿಂ, ಕೈಸ್ತ್ರರೊಂದಿಗೆ ಒಂದೇ ವೇದಿಕೆಯಲ್ಲಿ ನಡೆಯುವ ಈ ಸೌಹಾರ್ದ ಸಮಾರಂಭಕ್ಕೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಸೆಕ್ರೆಡ್ ಹಾರ್ಟ್ ಕರಿಕಾಲ್ ಚರ್ಚ್‍ನ ಧರ್ಮಗುರು ಫಾ.ಲವರೆನ್ಸ್ ಫರ್ನಾಂಡಿಸ್, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿದ್ವಾಂಸರಾದ ಮೌಲಾನ ಮಖ್ಬೂಲ್ ಆಹ್ಮದ್ ಕೋಬಟ್ಟೆ ನದ್ವಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಸ್.ಎಂ.ಪರ್ವೇಝ್, ಅಧ್ಯಕ್ಷರು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಭಟ್ಕಳ, ಜೆ.ಡಿ.ನಾಯ್ಕ ಮಾಜಿ ಶಾಸಕರು ಭಟ್ಕಳ, ಮಾಂಕಾಳ್ ಎಸ್. ವೈದ್ಯ ಮಾಜಿ ಶಾಸಕರು, ಮಮತಾ ದೇವಿ, ಸಹಾಯಕ ಆಯುಕ್ತರು ಭಟ್ಕಳ, ಡಾ.ಸವಿತಾ ಕಾಮತ್ ಆಡಳಿತ ವೈದ್ಯಾಧಿಕಾರಿಗಳು ತಾಲೂಕಾ ಆಸ್ಪತ್ರೆ ಭಟ್ಕಳ, ಬೆಳ್ಳಿಯಪ್ಪ ಪೊಲೀಸ್ ಉಪ ಅಧೀಕ್ಷಕರು (ಡಿ.ವೈ.ಎಸ್ಪಿ) ಭಟ್ಕಳ, ಕೃಷ್ಣ ನಾಯ್ಕ ಆಸಾರಕೇರಿ, ಅಧ್ಯಕ್ಷರು ನಾಮಧಾರಿ ಸಮಾಜ ಭಟ್ಕಳ, ಗಂಗಾಧರ್ ನಾಯ್ಕ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ, ರಾಧಕೃಷ್ಣ ಭಟ್ ಮಾಜಿ ಜಿಲ್ಲಾಧ್ಯಕ್ಷರು ಉ.ಕ.ಜಿ.ಕಾ.ಪತ್ರಕರ್ತರ ಸಂಘ ಶಿರಸಿ, ಮನಮೋಹನ್ ನಾಯ್ಕ ಜಿಲ್ಲಾಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಉತ್ತರ ಕನ್ನಡ ಹಾಗೂ ಜನತಾ ವಿದ್ಯಾಲಯ ಪಿ.ಯು ಕಾಲೇಜ್ ಇದರ ಪ್ರಾಂಶುಪಾಲರಾದ ಎ.ಬಿ.ರಾಮರಥ ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







